ಶ್ರೀಲಂಕಾದ ಕರುಣ ತಿಲಕರಿಗೆ ಬೂಕರ್ ಪ್ರಶಸ್ತಿ

Social Share

ಲಂಡನ್.ಅ.18- ಶ್ರೀಲಂಕಾದ ಲೇಖಕ ಶೆಹನ್ ಕರುಣ ತಿಲಕ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಂದಿದೆ. ಛಾಯಾಗ್ರಾಹಕ ಯುದ್ಧದ ಚಿತ್ರಗಳನ್ನು ತೆಗೆದು ಸಾವನ್ನಪ್ಪಿದ ನಡುವಿನ ಕ ಥೆ ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ ಮೀಡಾ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.

2019ರ ನಂತರ ಇದೇ ಮೊದಲ ಬಾರಿಗೆ ನೇರವಾಗಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ 50,000 ಪೌಂಡ್ ಬಹುಮಾನ ಸಿಕ್ಕಿದೆ. 1990ರ ದಶಕದ ಕಥಾ ಹಂದರವನ್ನು ಈ ಕಾದಂಬರಿ ಒಳಗೊಂಡಿದೆ. ಈ ಕಥನದ ನಾಯಕ ಮಾಲಿ ಅಲ ಮೀಡಾ ಸಲಿಂಗಕಾಮಿ. ಯುದ್ಧದ ಛಾಯಾಗ್ರಾಹಕ ಮತ್ತು ಜೂಜುಕೋರ ಎನ್ನುವ ಎರಡು ಬಿರುದುಗಳಿರುವ ಅವನು ಒಂದು ದಿನ ಸತ್ತು ಮೇಲೇಳುತ್ತಾನೆ ಎಂಬಲ್ಲಿಂದ ಕಥೆ ಆರಂಭವಾಗುತ್ತದೆ.

ತನ್ನ ಆಪ್ತರನ್ನು ಭೇಟಿಯಾಗಿ ತಾನೆಲ್ಲಿ ಚಿತ್ರಗಳನ್ನು ಬಚ್ಚಿಟ್ಟಿದ್ದೇನೆ ಎಂದು ತೋರಿಸಿಕೊಡಲು ಅವನಿಗೆ 7ತಿಂಗಳ ಕಾಲಾವಕಾಶ ಇರುತ್ತದೆ. ಈ ಚಿತ್ರಗಳು ದೇಶದ ಆಂತರಿಕ ಯುದ್ಧದ ಕ್ರೌರ್ಯಕ್ಕೆ ದಾಖಲೆಗಳಾಗಿರುತ್ತವೆ.

ಏಳು ತಿಂಗಳು ಎನ್ನುವುದು ಭವಿಷ್ಯದ ಬಗ್ಗೆ ನನಗಿರುವ ಭರವಸೆಯ ದ್ಯೋತಕ. ಭ್ರಷ್ಟಾಚಾರ, ಜನಾಂಗೀಯ ಹತ್ಯೆ ಮತ್ತು ಕುಟುಂಬ ರಾಜಕಾರಣಗಳು ಈವರೆಗೆ ಶ್ರೀಲಂಕಾಕ್ಕೆ ನೆರವಾಗಿಲ್ಲ. ಮುಂದೆಯೂ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಕರುಣ ತಿಲಕ ಬಹುಮಾನ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ ಹೇಳಿದರು.

ನನ್ನ ಕಾದಂಬರಿಯನ್ನು ಶ್ರೀಲಂಕಾದ ಪುಸ್ತಕ ಅಂಗಡಿಗಳಲ್ಲಿ ಮಾರಲಾಗುತ್ತದೆ. ಇದನ್ನು ವಾಸ್ತವ ಅಥವಾ ರಾಜಕೀಯ ವಿಡಂಬನೆ ವಿಭಾಗದಲ್ಲಿ ಪರಿಗಣಿಸುವುದಿಲ್ಲ ಎಂದು ನಂಬಿದ್ದೇನೆ ಎಂದು ಅವರು ಹೇಳಿದರು.

ಕರುಣ ತಿಲಕೆ ಪುಸ್ತಕ ಕುರಿತು ಮಾತನಾಡಿದ ಆಯ್ಕೆ ಸಮಿತಿಯ ಅಧ್ಯಕ್ಷ ನೀಲ್ ಮೆಕ್ ಗ್ರೆರ್ಗೊ, ಈ ಕಾದಂಬರಿ ಓದುವುದು ಉತ್ತಮ ಅನುಭವ ಕೊಡುತ್ತದೆ. ವಾಸ್ತವ ಜಗತ್ತಿನ ಆಚೆಗಿರುವ ಕಲ್ಪನಾ ವಿಹಾರಕ್ಕೆ ಇದು ಇಂಬುಕೊಡುತ್ತದೆ. ಬದುಕು-ಸಾವು, ದೇಹ-ಆತ್ಮ, ಪೂರ್ವ-ಪಶ್ಚಿಮ ಸೇರಿದಂತೆ ಹತ್ತಾರು ಬಗೆಯ ಚಿಂತನೆಗಳು ಈ ಕೃತಿಯಲ್ಲಿ ಹರಳುಗಟ್ಟಿವೆ ಎಂದು ಹೇಳಿದರು.

ಬೂಕರ್ ಪ್ರಶಸ್ತಿಗೆ ಈ ವರ್ಷ ಬ್ರಿಟಿಷ್ ಲೇಖಕ ಅಲನ್ ಗಾರ್ನ ಅವರ ಟ್ರೀಕಲ್ ವಾಕರ್, ಜಿಂಬಾಬ್ವೆ ಲೇಖಕ ನೊವಯಲೆಟ್ ಬುಲಾವಾಯೊ ಅವರ ಗ್ಲೋರಿ, ಐರಿಷ್ ಲೇಖಕಿ ಕ್ಲೇರ್ ಕೀಗನ್ ಅವರ ಸ್ಮಾಲ್ ಥಿಂU್ಸï ಲೈಕ್ ದೀಸï, ಅಮೆರಿಕ ಲೇಖಕ ಪರ್ಸಿವಲ್ ಎವಗ್ರ್ರೆಟ್ ಅವರ ದಿ ಟ್ರೀಸ್ ಮತ್ತು ಅಮೆರಿಕ ಲೇಖಕಿ ಎಲಿಜಬೆತ್ ಸ್ಟ್ರೌಟ್ ಅವರ ಓಹ್ ವಿಲಿಯಮ್ಸï ಪುಸ್ತಕಗಳಲ್ಲಿ ಸ್ಪರ್ಧೆಯಲ್ಲಿದ್ದವು.

Articles You Might Like

Share This Article