ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

Social Share

ಸಿಡ್ನಿ, ನ.6- ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗಾಗಿ ರಾಷ್ಟ್ರೀಯ ತಂಡದಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಲಾಗಿದೆ.

ಕಳೆದ ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು ಪ್ರಕರಣದಾಖಲಾಗಿ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ಇಂದು ಮುಂಜಾನೆ ಸಿಡ್ನಿ ಸಿಟಿ ಪೊಲೀಸ್‍ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಇಂಗ್ಲೆಂಡ್ ವಿರುದ್ದ ಶ್ರೀಲಂಕಾ ಸೋಲು ಕಂಡು ಪಂದ್ಯಾವಳಿಯಿಂದ ಹೊರಗೆ ಬಿದ್ದ ನಂತರ ತಂಡದ ಆಟಗಾರರು ಆಸ್ಟ್ರೇಲಿಯಾವನ್ನು ತೊರೆದಿದೆ, ಪಂದ್ಯಾವಳಿಯಲ್ಲಿ ಲಂಕಾ ತಂಡದಲ್ಲಿದ್ದ ಎಡಗೈ ಬ್ಯಾಟ್ಸ್‍ಮ್ಯಾನ್ ದನುಷ್ಕಾ ಗುಣತಿಲಕ ವಿಶ್ವಕಪ್‍ನ ಮೊದಲ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಿದರು ಮತ್ತು ಶೂನ್ಯಕ್ಕೆ ಔಟಾದರು. ನಂತರ, ತಂಡವು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಾಗಲೂ ಅವರು ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದರು.

ಮಧ್ಯಪ್ರದೇಶದ ಬಳಿಕ ಈಗ ಉತ್ತರಖಂಡ್‌ನಲ್ಲೂ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ

ನ್ಯೂ ಸೌತ್ ವೇಲ್ಸ ಪೊಲೀಸರು, ತನ್ನ ವೆಬ್‍ಸೈಟ್‍ನಲ್ಲಿ ಲಂಕಾದ ಪ್ರಜೆಯ ಬಂಧನದ ಬಗ್ಗೆಯೂ ಉಲ್ಲೇಖಿಸಿದೆ.
ಕಳೆದ ವಾರ ಸಿಡ್ನಿಯ ಪೂರ್ವದಲ್ಲಿ ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರ ಮೇಲೆ ದನುಷ್ಕಾ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದ್ದು ಈ ಬಗ್ಗೆ ಆಕೆ ದೂರು ನೀಡಿದ ಬಳಿಕ ಪೊಲೀಸರು ತನಿಖೆ ನಡೆಸಿದ್ದರು.

ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ, ರಾಜ್ಯದಲ್ಲಿ ಶಾಲಾ ಶಿಕ್ಷಣ ಸುಧಾರಣೆ

ನಿನ್ನೆ ರೋಸ್ ಬೇ ವಿಳಾಸದಲ್ಲಿ ತಜ್ಞ ಪೊಲೀಸರು ಪರಿಶೀಲನೆ ಕೈಗೊಂಡರು.ನಂತರ ಹೆಚ್ಚಿನ ವಿಚಾರಣೆ ನಂತರ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‍ನಲ್ಲಿರುವ ಹೋಟೆಲ್‍ನಲ್ಲಿ ಇಂದು ಮುಂಜಾನೆ 1 ಗಂಟೆಗೆ ದನುಷ್ಕಾ ಅವರನ್ನು ಬಂಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Articles You Might Like

Share This Article