14 ಭಾರತೀಯ ಮೀನುಗಾರರನ್ನು ಬಂಧಿಸಿದ ಲಂಕಾ ನೌಕಾಪಡೆ

Social Share

ರಾಮೇಶ್ವರಂ, ನ. 17 – ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು 14 ಭಾರತೀಯ ಮೀನುಗಾರರನ್ನು ಬಂಧಿಸಿದೆ.ಶ್ರೀಲಂಕಾ ನೌಕಾಪಡೆಯು ಯೋಧರು ಅಮಾನುಷವಾಗಿ ವರ್ತಿಸಿದ್ದು ಭಾರತೀಯ ಮೀನುಗಾರನೊಬ್ಬನ ಕಣ್ಣಿಗೆ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಳು ಮೀನುಗಾರನನ್ನು ರಾಮೇಶ್ವರಂನ ಜಾನ್ಸನ್ ಎಂದು ಗುರುತಿಸಲಾಗಿದ್ದು, ತಡರಾತ್ರಿ ಲಂಕಾ ನೌಕಾ ಸಿಬ್ಬಂದಿ ದಾಳಿ ನಡೆಸಿದಾಗ ಆತನ ಕಣ್ಣಿಗೆ ಗಾಯವಾಗಿದೆ ಎಂದು ಅವರು ಹೇಳಿದರು.

ನಾಗಪಟ್ಟಣಂ ಜಿಲ್ಲೆಗೆ ಸೇರಿದ 14 ಮೀನುಗಾರರನ್ನು ಲಂಕಾ ನೌಕಾಪಡೆ ಬಂಧಿಸಿದೆ. ಅವರ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ಘಟನೆಗಳು ಮೀನುಗಾರರಲ್ಲಿ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ ಎಂದು ಮೀನುಗಾರರ ಪ್ರತಿನಿಗಳು ತಿಳಿಸಿದ್ದಾರೆ.

Articles You Might Like

Share This Article