ನೋಯ್ಡಾ, ಆ.9- ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ ಕಣ್ಮರೆಯಾಗಿದ್ದ ಸ್ವಯಂಘೋಷಿತ ಬಿಜೆಪಿ ಕಾರ್ಯಕರ್ತ ಶ್ರೀಕಾಂತ್ ತ್ಯಾಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎನ್ನಲಾಗಿದ್ದ ಶ್ರೀಕಾಂತ್ ತ್ಯಾಗಿ ಘಟನೆ ನಡೆದು ಮೂರು ದಿನಗಳ ನಂತರ ತಲೆಮರೆಸಿಕೊಂಡಿದ್ದ. ಈತನ ಜತೆಗೆ ಇತರೆ ಮೂವರು ಆರೋಪಿಗಳನ್ನು ಉತ್ತರ ಪ್ರದೇಶದ ಮೀರತ್‍ನಲ್ಲಿ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ನಿನ್ನೆಯಷ್ಟೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ನೋಯ್ಡಾದಲ್ಲಿರುವ ಶ್ರೀಕಾಂತ್ ತ್ಯಾಗಿಗೆ ಸೇರಿದ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿತ್ತು. ಈತನ ಬಂಧನಕ್ಕಾಗಿ ಅಲ್ಲಿನ ಸರ್ಕಾರ ವಿಶೇಷ ತಂಡವನ್ನು ರಚಿಸಿತ್ತು.