ಕಾಗವಾಡ : ಕಟ್ಟಡ ಕಾರ್ಮಿಕರಿಗೆ ಸರಕಾರದ ವಿವಿಧ ಯೋಜನೆಗಳು ಹಾಗೂ ಧನಸಹಾಯದ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕರಾದ ಶ್ರೀಮಂತ ಪಾಟೀಲ ಹೇಳಿದರು.
ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ಕಾರ್ಮಿಕರಿಗೆ ಸರಕಾರ ನೀಡುವ ಧನಸಹಾಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇವತ್ತು ಉಗಾರ ಬುದ್ರುಕ ಗ್ರಾಮದಲ್ಲಿ ಉದ್ಘಾಟನೆಗೊಂಡ ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರಕಾರದ ಹೆಚ್ಚಿನ ಸೌಲಭ್ಯಗಳು, ಹಕ್ಕುಗಳ ಸಂರಕ್ಷಣೆ ನ್ಯಾಯ ಸಮ್ಮತದಿಂದ ಪಾರದರ್ಶಕವಾಗಿ ಕಾರ್ಯನಿರ್ವಹಸಿಲಿ ಎಂದರು.
ಕಾರ್ಮಿಕರ ಅಧಿಕಾರಿ ಮಹೇಶ ಕುಳಲಿ ಮಾತನಾಡಿ ಕಾರ್ಮಿಕರಿಗೆ ಸರಕಾರ ವಿವಿಧ ಯೋಜನೆಗಳಾದ ಇ- ಶ್ರಮ,ಕಾರ್ಮಿಕರ ಕಾರ್ಡ, ಉಚಿತ ಬಸ್ ಪಾಸ್, ಅಪಘಾತ ವಿಮೆ ಕಾರ್ಮಿಕರಿಗೆ ಅನೂಕೂಲಕರವಾಗಲಿದೆಂದರು.
ಅಥಣಿಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಸಂಜೀವ ಭೋಸಲೆ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಭುಜಗೌಡ ಪಾಟೀಲ,ರಾಹುಲ ಶಹಾ, ಗ್ರಾಪಂ ಉಪಾಧ್ಯಕ್ಷರಾದ ಆಶಾ ಪೂಜಾರಿ, ವಸಂತ ಖೊತ, ವಿಜಯ ಅಸೂದೆ, ರವಿ ಕಾಂಬಳೆ, ಡಾ.ಬಿ. ಆರ್ ಅಂಬೇಡ್ಕರ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ಶ್ರಾವಣ ಕಾಂಬಳೆ, ಉಪಾಧ್ಯಕ್ಷ ಪಿಂಟು ಕಾಂಬಳೆ ಸೇರಿದಂತೆ ಗ್ರಾ.ಪಂ ಸದಸ್ಯರು, ಉಗಾರ ಖುರ್ದ,ಕುಸನಾಳ, ಮೊಳವಾಡ ಶೇಡಬಾಳ ಗ್ರಾಮಸ್ಥರು ಭಾಗಿಯಾಗಿದ್ದರು.