ಚಿಕ್ಕಮಗಳೂರು,ಸೆ.29- ಗೋಮಾಳದ ಜಾಗವನ್ನು ಸರ್ಕಾರ ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆಸಿದೆ. ಈ ರೀತಿ ಮಾಡಿದರೆ ನಮ್ಮ ಕೊಲೆ ಮಾಡುವುದಾಗಿ ನನಗೆ ಬೆದರಿಕೆ ಬಂದಿದೆ ಎಂದು ಶಾಸಕ ರಾಜೇಗೌಡರಿಗೆ ಸಭೆ ಗಮನಕ್ಕೆ ತಂದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಉಸ್ತುವಾರಿ ಮಂತ್ರಿ ಬೈರತಿ ಬಸವರಾಜ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಟಿ.ಡಿ ರಾಜೇಗೌಡ ವಿಷಯ ಪ್ರಸ್ತಾಪಿಸಿ ಕೊಪ್ಪ ಡಿಸಿಎಫ್ ಹಾಗೂ ನನಗೆ ಬೆಳಗ್ಗೆ ಬೆದರಿಕೆ ಬಂದಿದೆ. ಈ ಬಗ್ಗೆ ನಾನು ದೂರು ಕೊಡುವುದಿಲ್ಲ. ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರ ಹಾಗೂ ನಮ್ಮ ಕರ್ತವ್ಯ ಅದನ್ನು ನಾವು ಪಾಲಿಸಿಲ್ಲ ಎಂದರು.
ಈ ಭಾಗದ ಜನರ ಬದುಕಿಗೆ ಕಂಟಕ ಬಂದಾಗ ಈ ರೀತಿ ಬೆದರಿಕೆ ಹಾಕಿದ್ದಾರೆ. ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ನಾನು ಯಾರ ಮೇಲೂ ದೂರು ಕೊಡುವುದಿಲ್ಲ ಅವರ ಬೇಡಿಕೆ ಸರಿ ಇದೆ. ಇತ್ತೀಚೆಗೆ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಯವರು ನೋಟಿಫಿಕೇಶನ್ ಮಾಡಲು ಹೊರಟಿದ್ದಾರೆ ಇದರಿಂದ ಜನರ ಬದುಕು ದುಸ್ತರವಾಗುತ್ತದೆ ಎಂದು ಹೇಳಿದ್ದಾರೆ.
ನಕ್ಸಲರು ಅಥವಾ ಇನ್ಯಾರು ಬೆದರಿಕೆ ಹಾಕಿದ್ದಾರೆಂದು ಕೇಳಿದಾಗ ಅದನ್ನು ಬಹಿರಂಗಪಡಿಸುವುದಿಲ್ಲ. ಹಿಂದೆಲ್ಲ ಏನಾಗಿದೆ ಎಂದು ಮಾಧ್ಯಮದವರಿಗೆ ಗೊತ್ತಿದೆ ಎಂದು ಹೇಳಿದರು. ನಮಗೆ ರಕ್ಷಣೆ ಕೊಡುವವರು ಯಾರು? ಎಂದು ಪ್ರಶ್ನಿಸಿದರು.
ಕೊಲೆಬೆದರಿಕೆಗೆ ಸಂಬಂಸಿದಂತೆ ಶಾಸಕ ಟಿ.ಡಿ ರಾಜೇಗೌಡ ದೂರು ನೀಡಿದರೆ ಉನ್ನತ ಪೆÇಲೀಸ್ ಅಕಾರಿಗಳಿಂದ ತನಿಖೆ ಮಾಡಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ತಿಳಿಸಿದರು.
ಶಾಸಕ ರಾಜೆಗೌಡರೊಂದಿಗೆ ಬೆದರಿಕೆಗೆ ಸಂಬಂಸಿದಂತೆ ಚರ್ಚಿಸಿ ಅವರಿಂದ ದೂರು ಪಡೆದು ತನಿಖೆ ನಡೆಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.