10ರ ಓಲೈಕೆಗೆ ಮುಂದಾದರೆ 90 ಕೈತಪ್ಪೀತು ಜೋಕೆ : ಶ್ರೀರಾಮುಲು

Social Share

ಬೆಂಗಳೂರು,ಡಿ.16- ಶೇಕಡ 10ರಷ್ಟು ಮತ ಪಡೆಯಲು ಭಯೋತ್ಪಾದಕ ಚಟುವಟಿಕೆ ನಡೆಸುವ ದೇಶದ್ರೋಹಿಗಳಿಗೆ ಅನುಕಂಪ ತೋರಿಸಿದರೆ ಶೇ.90ರಷ್ಟು ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ, ಶೇ.10ರಷ್ಟು ಮತ ಪಡೆಯಲು ಇಂತಹ ಭಯೋತ್ಪಾದನೆ ಚಟುವಟಿಕೆ ನಡೆಸುವವರಿಗೆ ಕುಮ್ಮಕ್ಕು ಕೊಟ್ಟರೆ ಶೇ.90ರಷ್ಟು ಮತ ಕಳೆದುಕೊಳ್ಳುವಿರಿ ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್‍ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಈ ಹಿಂದೆ ಹಲವಾರು ದೇಶಿ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ. ನಿಮ್ಮ ಪಾಲಿಗೆ ಅವನೊಬ್ಬ ದೇಶಿಪ್ರೇಮಿಯಾಗಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂತದ್ದೇನು ಇಲ್ಲ ಎಂದು ಕುಹುಕವಾಡಿದ್ದಾರೆ.

ಡ್ಯಾನ್ಸ್ ವಿಡಿಯೋ ವೈರಲ್: ನಾಲ್ಕು ಮಹಿಳಾ ಕಾನ್‍ಸ್ಟೆಬಲ್‍ಗಳ ಅಮಾನತು

ಇಂತಹ ದೇಶ ದ್ರೋಹಿಗಳನ್ನು ಓಲೈಕೆ ಮಾಡಿದ ಪರಿಣಾಮದಿಂದಲೇ ಕಾಂಗ್ರೆಸ್ ಇಂದು ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕ ಜನತೆಯೇ ನಿಮಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಶ್ರೀರಾಮುಲು ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

minister, riramulu, KPCC president, DK Shivakumar,

Articles You Might Like

Share This Article