ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

Social Share

ಶ್ರೀರಂಗಪಟ್ಟಣ, ಡಿ. 4- ಹನುಮ ಜಯಂತಿ ಅಂಗವಾಗಿ ಇಲ್ಲಿನ ನಿಮಿಷಾಂಭ ದೇಗುಲದಿಂದ ಜಾಮಿಯಾ ಮಸೀದಿವರೆಗೆ ವೈಭವದ ಶೋಭಾಯಾತ್ರೆ ನಡೆಯಿತು. ಹನುಮ ಮಾಲಾಧಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು, ಎಲ್ಲರನ್ನು ಆಕರ್ಷಿಸಿತ್ತು.

ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ನೇತೃತ್ವದಲ್ಲಿ ನಡೆದ ಶೋಭಾಯಾತ್ರೆಗೆ ಯಾವುದೇ ಅಹಿತಕರ ಘಟನೆ ನಡೆದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಜಾಮಿಯಾಮ್ ಮಸೀದಿ ಈ ಹಿಂದೆ ಹನುಮಂತನ ದೇವಾಲಯ ಇತ್ತು ಎಂದು ಹಿಂದುಪರ ಸಂಘಟನೆಗಳು ಹೇಳುತ್ತಿದ್ದು, ಈಗಾಗಲೇ ಕಾನೂನು ಹೋರಾಟಕ್ಕೂ ಮುಂದಾಗಿದೆ.

ಇದರ ನಡುವೆ ಹನುಮ ಜಯಂತಿ ಪ್ರಯುಕ್ತ ಕರೆ ನೀಡಿದ್ದ ಬೃಹತ್ ಶೋಭಾಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಕೇಸರಿ ಧ್ವಜಗಳು ಎಲ್ಲೆಡೆ ರಾರಾಸಿದೆ.
ರಸ್ತೆಯ ಅಕ್ಕ-ಪಕ್ಕದಲ್ಲೂ ಧ್ವಜಗಳನ್ನು ಹಾರಿಸಲಾಗಿದ್ದು, ಇಡೀ ಶ್ರೀರಂಗಪಟ್ಟಣ ಶೃಂಗಾರಗೊಂಡಿತ್ತು.

ಇಂದು ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೊಡೊ ಯಾತ್ರೆ

ಪೊಲೀಸರ ಬಿಗಿ ಪಹರೆ ಏರ್ಪಡಿಸಿದ್ದು, ಜಾಮಿಯಾಮ್ ಮಸೀದಿ ಬಳಿ ತಲುಪುತ್ತಿದ್ದಂತೆ ಎಲ್ಲರನ್ನು ಒಗ್ಗೂಡಿಸಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ತಡೆಯಲಾಯಿತು. ಜಯ್ ಶ್ರೀ ರಾಮ್ ಘೋಷಣೆ ಕೂಡ ಜೋರಾಗಿತ್ತು. ನಾಳೆಯೂ ಕೂಡ ಹನುಮ ಜಯಂತಿ ನಡೆಯುತ್ತಿದ್ದು, ಇದಕ್ಕಾಗಿ ಹಿಂದುಪರ ಸಂಘಟನೆಗಳು ವ್ಯಾಪಕ ಸಿದ್ಧತೆಯನ್ನು ಮಾಡಿಕೊಂಡಿದೆ.

ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

ನಿನ್ನೆಯಿಂದಲೇ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಪರಿಸ್ಥಿತಿ ಹದಗೆಡದಂತೆ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ನಿಮಿಷಾಂಬ ದೇವಾಲಯದ ಬಳಿ ಬೆಳಗ್ಗೆಯೇ ನೂರಾರು ಜನರು ಜಮಾಯಿಸಿ ತಾಳ, ವಾದ್ಯಗಳೊಂದಿಗೆ ಶೋಭಾಯಾತ್ರೆಗೆ ಬರುವವರಿಗೆ ಶಾಲು, ಧ್ವಜಗಳನ್ನು ನೀಡಿ ಅವರನ್ನು ಹುರಿದುಂಬಿಸಿದರು.

ಸುಮಾರು 3 ಕಿಲೋ ಮೀಟರ್ ಸಾಗಿದ ಶೋಭಾಯಾತ್ರೆಗೆ ಅಲ್ಲಲ್ಲಿ ಜನರು ಹೂಗಳನ್ನು ಎರಚಿದ್ದು ಕೂಡ ಕಂಡು ಬಂತು.

Srirangapatna, Hanuman, Maldharis, Shobha Yatra,

Articles You Might Like

Share This Article