ಅಮೆರಿಕದಲ್ಲಿ ಜೂ.ಎನ್‌ಟಿಆರ್‌ಗೆ ಅದ್ಭುತ ಸ್ವಾಗತ

Social Share

ಲಾಸ್‍ಏಂಜಲೀಸ್,ಜ.10- ಟಾಲಿವುಡ್‍ನ ಬ್ಲಾಕ್ ಬಸ್ಟರ್ ಹೀರೋ ಜೂನಿಯರ್ ಎನ್‌ಟಿಆರ್‌ಗೆ ಅಮೆರಿಕದಲ್ಲೂ ಅದ್ಬುತ ಸ್ವಾಗತ ಸಿಕ್ಕಿದೆ. ಅವರು ನಟಿಸಿರುವ ಆರ್‌ಆರ್‌ಆರ್‌ ಚಿತ್ರ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ನಾಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿರುವುದರಿಂದ ಅವರು ಲಾಸ್ ಏಂಜಲೀಸ್‍ನ ಚೈನಿಸ್ ಥಿಯೇಟರ್‍ಗೆ ಆಗಮಿಸಿದಾ ಅಭಿಮಾನಿಗಳು ಅವರನ್ನು ಸುತ್ತುವರೆದು ತಮ್ಮ ನೆಚ್ಚಿನ ನಾಯಕನ ಕೈ ಕುಲುಕಿ ಖುಷಿಪಟ್ಟರು.

ಆರ್‌ಆರ್‌ಆರ್‌ ಹಾಗೂ ಆ ಚಿತ್ರದ ನಾಟು ನಾಟು ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇದರ ಜತೆಗೆ ನಾಟು ನಾಟು ಮೂಲಗೀತೆ ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿರುವುದು ವಿಶೇಷವಾಗಿದೆ.

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ

ರಾಜಮೌಳಿ ನಿರ್ದೇಶನದಲ್ಲಿ ಹಿಂದಿ,ತೆಲುಗು,ತಮಿಳು ಮತ್ತುಮಲಯಾಳಂ ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾದ ಆರ್‌ಆರ್‌ಆರ್‌ ಚಿತ್ರ ಆಸ್ಕರ್‍ನ ವಿವಿಧ ವಿಭಾಗಗಳಲ್ಲಿ ಪರಿಗಣಿಸಲ್ಪಟ್ಟಿದೆ.

ಇದರ ಜತೆಗೆ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ ಅಂಡ್ ಟೆಲಿವಿಷನ್ ಆಟ್ಸರ್ ಹಾಗೂ ಅತ್ಯುತ್ತಮ ಚಲನಚಿತ್ರ (ಇಂಗ್ಲಿಷ್ ಅಲ್ಲದ) ವಿಭಾಗದಲ್ಲಿಯೂ ಆರ್‍ಆರ್‍ಆರ್ ಚಿತ್ರ ಗಮನ ಸೆಳೆದಿದೆ.

ಇದರ ಮಧ್ಯೆ ರಾಜಮೌಳಿ ಅವರು ಆರ್‍ಆರ್‍ಆರ್ ಚಿತ್ರ ನಿರ್ದೇಶನಕ್ಕಾಗಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‍ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದಾರೆ.

SS Rajamouli, Jr NTR, receive, standing ovation, during, ‘RRR’, America,

Articles You Might Like

Share This Article