ರಾಜ್ಯದಲ್ಲಿ 19.58 ಲಕ್ಷ ರೈತರಿಗೆ ಸಾಲ ವಿತರಣೆ

Social Share

ಬೆಂಗಳೂರು, ಜ.24- ರಾಜ್ಯದಲ್ಲಿ ಇದುವರೆಗೂ 19.58 ಲಕ್ಷ ರೈತರಿಗೆ ಸಾಲ ವಿತರಣೆ ಮಾಡಲಾಗಿದ್ದು, ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಶೇ.100ರಷ್ಟು ಗುರಿ ಸಾಸಲಾಗಿದೆ. ಉಳಿದ ಜಿಲ್ಲಾಗಳು ಶೇ.70ರಷ್ಟು ಸಾಧನೆ ಮಾಡಲಾಗಿದೆ. ಎಲ್ಲ ಡಿಸಿಸಿ ಬ್ಯಾಂಕ್‍ಗಳು ಶೇ.100ರಷ್ಟು ಸಾಧನೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
2021-22ನೆ ಸಾಲಿನಲ್ಲಿ ಕೃಷಿ ಸಾಲ ವಿತರಣೆ ಹಾಗೂ ವಸೂಲಾತಿ ಕುರಿತಂತೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ವಚ್ರ್ಯುವಲ್ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ವಸೂಲಾತಿಯು ಶೇ.95ರಷ್ಟಾಗಿದೆ. ತಂತ್ರಾಂಶ ಅಭಿವೃದ್ಧಿಯಾಗದೆ ಇರುವುದರಿಂದ ಸಾಲ ವಿತರಣೆಯನ್ನು ಹಳೆ ವ್ಯವಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಮಾರ್ಚ್ 25ರೊಳಗೆ ಗುರಿ ಮುಟ್ಟಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
5400 ಫ್ಯಾಕ್ಸ್ ರಾಜ್ಯದಲ್ಲಿವೆ. ಕೇಂದ್ರ ಸರ್ಕಾರ ಎಲ್ಲ ಫ್ಯಾP್ಸï ಮತ್ತು ಡಿಸಿಸಿ ಅಪೆP್ಸï ಬ್ಯಾಂಕ್ ಒಂದೆ ಡಿಜಿಟಲ್ ವ್ಯಾಪ್ತಿಗೆ ತರಲು ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರ ಶೇ.60ರಷ್ಟು ನೀಡಲಿದೆ. ಉಳಿದ ಹಣವನ್ನು ಡಿಸಿಸಿ ಹಾಗೂ ಫ್ಯಾಕ್ಸ್‍ಗಳು ನೀಡಬೇಕು ಎಂದು ಹೇಳಿದರು.
ಜ.27ರಂದು ಈ ಬಗ್ಗೆ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮೂರು ವರ್ಷಗಳಲ್ಲಿ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಲಾಗುವುದು. ಕೋವಿಡ್‍ನಿಂದ ಮೃತರಾದವರಿಗೆ ಅಲ್ಲಿನ ಡಿಸಿಸಿ ಬ್ಯಾಂಕ್‍ನವರೆ ಅವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಪರಿಹಾರ ನೀಡಿವೆ. ಯಾವುದೇ ಕಾರಣಕ್ಕೂ ಸಾಲ ಮನ್ನಾ ಮಾಡುವ ಪ್ರಸ್ತಾಪ ಇಲ್ಲ. ಶೂನ್ಯ ಬಡ್ಡಿ ಸಾಲ ವಿತರಣೆಗೆ ಹೆಚ್ಚಿನ ರೈತರಿಗೆ ತಲುಪಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಕಾರ ಸಂಘಗಳ ನಿಬಂಧಕರಾದ ಎಸ್.ಜಿಯಾವುಲ್ಲಾ, ಸಹಕಾರ ಸಂಘಗಳ ಅಪರ ನಿಬಂಧಕರಾದ (ವಸತಿ ಮತ್ತು ಇತರೆ) ಕೆ.ಎಸ್. ನವೀನ್, ಸಹಕಾರ ಸಂಘಗಳ ಅಪರ ನಿಬಂಧಕ (ಪತ್ತು) ಎ.ಸಿ.ದಿವಾಕರ್, ಸಹಕಾರ ಸಂಘಗಳ ಅಪರ ನಿಬಂಧಕ (ಕೈಗಾರಿಕೆ ಮತ್ತು ಹೈನುಗಾರಿಕೆ) ವೈ.ಎಚ್.ಗೋಪಾಲಕೃಷ್ಣ, ಸಹಕಾರ ಸಂಘಗಳ ಅಪರ ನಿಬಂಧಕ (ಬಳಕೆ ಮತ್ತು ಮಾರಾಟ) ಕೆ.ಎಂ.ಆಶಾ, ಸಹಕಾರ ಸಂಘಗಳ ಬೆಂಗಳೂರು ಪ್ರಾಂತ್ಯದ ಜಂಟಿ ನಿಬಂಧಕ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಅಕಾರಿಗಳು ಹಾಜರಿದ್ದರು.
# ನನ್ನ ಕೆಲಸ ನನಗೆ ತೃಪ್ತಿ ತಂದಿದೆ
ಸಹಕಾರ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷವಾಯಿತು. 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ನೂರಕ್ಕೆ ನೂರು ತಜ್ಞ ಅಲ್ಲ. ರೈತರ ಪರವಾಗಿದೆ ಅಂತ ತೋರಿಸಿದ್ದೇನೆ. ನನ್ನಕೆಲಸದ ಬಗ್ಗೆ ನನಗೆ ತೃಪ್ತಿ ಇದೆ ಎಂದು ಹೇಳಿದರು.
ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸರ್ಕಾರಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಸರ್ಕಾರಕ್ಕೆ, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಇಲ್ಲಿಯೇ ತೃಪ್ತನಾಗಿದ್ದಾನೆ. ಇಲ್ಲಿಯೇ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article