ಮಾಜಿ ಫುಟ್‍ಬಾಲ್ ಆಟಗಾರ ಭೌಮಿಕ್ ನಿಧನ

Social Share

ಕೋಲ್ಕತಾ,ಜ.22- ಭಾರತದ ಮಾಜಿ ಫುಟ್‍ಬಾಲ್ ಆಟಗಾರ ಸುಭಾಸ್ ಭೌಮಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದ ನಗರದ ಆಸ್ಪತ್ರೆಯೊಂದರಲ್ಲಿ ಇಂದು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಭೋಂಬೋಲ್‍ದಾ ಎಂದು ಜನಪ್ರಿಯರಾಗಿದ್ದ ಭೌಮಿಕ್ (72) ಮಧುಮೇಹ ಹಾಗೂ ಮೂತ್ರಪಿಂಡ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನಸುಕಿನ ಜಾವ 3-30ರಲ್ಲಿ ಅಸುನೀಗಿದರು ಎಂದು ಮೂಲಗಳು ಹೇಳಿವೆ.
ಸ್ಟ್ರೈಕರ್ ಆಗಿದ್ದ ಭೌಮಿಕ ಈಸ್ಟ್ ಬೆಂಗಾಲ್, ಮೋಹನ್ ಬಾಗನ್ ಪರವಾಗಿ ಆಡಿದ್ದರು ಮತ್ತು ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಸಿದ್ದರು.
ಅವರು ಓರ್ವ ಯಶಸ್ವೀ ಫುಟ್‍ಬಾಲ್ ಕೋಚ್ ಆಗಿದ್ದು, ಈಸ್ಟ್ ಬೆಂಗಾಲ್, ಮೋಹನ್‍ಬಾಗನ್, ಮಹಮ್ಮಡನ್ ಸ್ಟೋರ್ಟಿಂಗ್, ಸಲ್ಲಾಂವ್‍ಕರ್ ಮತ್ತು ಚರ್ಚಿಲ್ ಬ್ರದರ್ಸ್ ಮುಂತಾದ ತಂಡಗಳಿಗೆ ತರಬೇತಿ ನೀಡಿದ್ದರು.

Articles You Might Like

Share This Article