ಕಳೆದ 6 ತಿಂಗಳಲ್ಲಿ ಭರ್ಜರಿ ತೆರಿಗೆ ಕಲೆಕ್ಷನ್ ಮಾಡಿದ ರಾಜ್ಯ ಸರ್ಕಾರ, ಇಲ್ಲಿದೆ ಲೆಕ್ಕ

Social Share

ಬೆಂಗಳೂರು,ಅ.25- ರಾಜ್ಯ ಸರ್ಕಾರ ತನ್ನ ಪ್ರಮುಖ ತೆರಿಗೆ ಮೂಲವಾದ, ವಾಣಿಜ್ಯ ತೆರಿಗೆ ಮೂಲಕ ಭರ್ಜರಿ ಆದಾಯ ಸಂಗ್ರಹ ಮಾಡಿದ್ದು, ಕಳೆದ ಆರು ತಿಂಗಳಲ್ಲಿ 47,435.05 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಿದೆ.
2022-23 ಸಾಲಿನಲ್ಲಿ ರಾಜ್ಯ ಸರ್ಕಾರ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಸಂಗ್ರಹ ಮಾಡುತ್ತಿದೆ. ಕೋವಿಡ್ ಲಾಕ್‍ಡೌನ್ ಏಟಿನ ಬಳಿಕ ಆರ್ಥಿಕತೆ ಚೇತರಿಸಿಕೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಂಡಿದೆ.

ಅದರಲ್ಲೂ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆ ನಿರೀಕ್ಷೆಗಿಂತ ಭರಪೂರ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ. ಜಿಎಸ್‍ಟಿ ಹಾಗೂ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಭರ್ಜರಿ ಆದಾಯ ಸಂಗ್ರಹ ಮಾಡಿದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.

ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಉತ್ತಮ ಆದಾಯ ಸಂಗ್ರಹಿಸಿದೆ. ಕಳೆದ ಬಾರಿಗಿಂತ ಈ ಬಾರಿ ಆರು ತಿಂಗಳಲ್ಲಿ 2,724.68 ಕೋಟಿ ರೂ. ಹೆಚ್ಚುವರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಕಾರು, ಸ್ಥಳದಲ್ಲೇ ಮೂವ ಸಾವು

ಈ ಆರ್ಥಿಕ ವರ್ಷದಲ್ಲಿ 53,220 ಕೋಟಿ ರೂ. ಜಿಎಸ್‍ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದ್ದು, ಮೊದಲಾರ್ಧ ವರ್ಷದಲ್ಲಿ 37,211.53 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ. 2021-22ನೇ ಸಾಲಿನಲ್ಲಿ ಈ ಅವಯಲ್ಲಿ 34,457.71 ಕೋಟಿ ಜಿಎಸ್‍ಟಿ ಸಂಗ್ರಹ ಮಾಡಲಾಗಿತ್ತು.

ಈ ವರ್ಷ 2,759.82 ಕೋಟಿ ರೂ. ಹೆಚ್ಚುವರಿ ಜಿಎಸ್‍ಟಿ ಸಂಗ್ರಹ ಮಾಡಲಾಗಿದೆ. ಇನ್ನುಳಿದ ಆರು ತಿಂಗಳಲ್ಲಿ ಜಿಎಸ್‍ಟಿ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂದು ಅಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಜೆಟ್ ಅಂದಾಜನ್ನು ಮೀರಿ ಈ ಬಾರಿ ಜಿಎಸ್‍ಟಿ ಸಂಗ್ರಹವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈವರೆಗೆ ತೈಲ ಮೇಲಿನ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಬರೋಬ್ಬರಿ 9,540.40 ಕೋಟಿ ರೂ. ಆದಾಯ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಯಲ್ಲಿ 9,723.37 ಕೋಟಿ ರೂ., ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 17,640 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಅಂದಾಜಿಸಲಾಗಿದೆ.

ಬಿಜೆಪಿ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳೋದಕ್ಕೆ ಮಾತ್ರ ಸೀಮಿತವೇ..?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಜಿಎಸ್‍ಟಿ, ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ರೂಪದಲ್ಲಿ ಬರೋಬ್ಬರಿ 47,435.05 ಕೋಟಿ ರೂ. ಸಂಗ್ರಹ ಮಾಡಿದೆ. ಕಳೆದ ಬಾರಿ ಇದೇ ಅವಗೆ ಒಟ್ಟು 44,710.37 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿತ್ತು.ಆ ಮೂಲಕ 2,724.68 ಕೋಟಿ ರೂ. ಹೆಚ್ಚುವರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ. ಈ ಬಾರಿ ಬಜೆಟ್ ಅಂದಾಜಿಗಿಂತಲೂ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗಲಿದೆ ಎಂಬುದು ಅಕಾರಿಗಳ ಲೆಕ್ಕಾಚಾರವಾಗಿದೆ.

ಯಾವ ತಿಂಗಳು ಎಷ್ಟು ಜಿಎಸ್‍ಟಿ ಸಂಗ್ರಹ (ಕೋಟಿಗಳಲ್ಲಿ):
ತಿಂಗಳು ಏಪ್ರಿಲ್ ಮೇ ಜೂನ್ ಜುಲೈ ಆಗಸ್ಟ್ ಸೆಪ್ಟಂಬರ್
ಜಿಎಸ್‍ಟಿ 5,205.60 12,814.71 5,229.47 4,721.38 4,627.45 4,612.92

ತೈಲ ಮೇಲಿನ ಮಾರಾಟ ತೆರಿಗೆ :
ತಿಂಗಳು ಏಪ್ರಿಲ್ ಮೇ ಜೂನ್ ಜುಲೈ ಆಗಸ್ಟ್ ಸೆಪ್ಟಂಬರ್
ಮಾರಾಟ ತೆರಿಗೆ 1,602.64 1,635.32 1,689.18 1,645.75 1,462.02 1,505.59

Articles You Might Like

Share This Article