ಯುವಕರ ಪ್ರತಿಭೆ ಹೊರತೆಗೆಯುವ ಕಾರ್ಯವೇ ಯುವ ಜನೊತ್ಸವ : ಸಿಎಂ

Social Share

ಮಂಡ್ಯ,ಜ.6-ಯುವಕರ ಪ್ರತಿಭೆಯನ್ನು ಹೊರತೆಗೆಯುವಂತಹ ಕಾರ್ಯವೇ ಯುವ ಜನೊತ್ಸವ. ಯುವಕರು ದೇಶದ ದೊಡ್ಡ ಆಸ್ತಿ. ಆಗಾಗಿ ಯುವಕರನ್ನು ಎಲ್ಲಾ ರಂಗದಲ್ಲೂ ಪ್ರೋತ್ಸಾಹಿಸುವುದು ಬಹಳ ಮುಖ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ಯುವ ಜನೋತ್ಸವ-2022ರ ಸಮಾರೂಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಯುವ ಜನೋತ್ಸವಕ್ಕೆ ಪ್ರಕೃತಿಯಲ್ಲಿ ಶಕ್ತಿ ಎಂದರೆ ಅದು ಯುವ ಶಕ್ತಿ. ಯಾವ ದೇಶದಲ್ಲಿ ಯುವಕರು ಹೆಚ್ಚಿದ್ದಾರೆ ಆ ದೇಶ ಭವ್ಯವಾದ ಭವಿಷ್ಯವಿದೆ. ಯುವಕರಲ್ಲಿ ಶಿಸ್ತು ಇರಬೇಕು ಶಿಸ್ತು ಇದ್ದರೆ ಯಾವುದಾರು ಗುರಿ ತಲುಪಬಹುದು ನಮ್ಮ ಚಾರಿತ್ಯವನ್ನು ಬೆಳೆಸಿಕೊಳ್ಳಬಹುದು. ಈ ದೇಶದಲ್ಲಿ ಬಹಳ ಸಂಘರ್ಷ ಇದೆ. ಆದರೆ ಬೇಕಾಗಿರುವುದು ಸಮನ್ವಯ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ಯುವಜನೋತ್ಸವನ್ನು ಮಾಡುತ್ತಿದ್ದೇವೆ. ಈ ವಾತಾವರಣ ಪರಮ ಪೂಜ್ಯರ ಆಶೀರ್ವಾದ ಇವೆಲ್ಲವೂ ನಮ್ಮ ಯುವಕರಿಗೆ ಚಾರಿತ್ರೆ ಮೂಡಿಸಿದೆ ಎಂದು ತಿಳಿಸಿದರು. ಜೊತೆ ಜೊತೆಗೆ ಪರಮ ಪೂಜ್ಯರು ಇರುವುದರಿಂದ ನಮ್ಮ ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ನಮ್ಮ ಆಚರಣೆಗಳು ಯಾವ ರೀತಿ ಇರಬೇಕು. ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರಬೇಕು ಎಂಬುವಂತಹ ಮಾರ್ಗದರ್ಶನ ಪೂಜ್ಯರಿಂದ ಸಿಕ್ಕಿದೆ ಎಂದರು.
ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಯುವಜನರು ಬಂದಿರುವಂತದ್ದು ಯುವಜನೋತ್ಸವ ಕಾರ್ಯಕ್ರಮಕ್ಕೆ ಸಮನ್ವಯವನ್ನು ತಂದಿದೆ. ಯುವಕರಿಗೆ ಬಹಳ ಶಕ್ತಿ ಇದೆ ಅದರ ಜೊತೆಯಲ್ಲಿ ಪ್ರಶ್ನಿಸುವಂತಹ ಮನೋಭಾವ ಇರುತ್ತದೆ. ಬಹಳಷ್ಟು ಕುತೂಹಲ ಇರುತ್ತದೆ ಎಂದು ತಿಳಿಸಿದರು.
ಯುವಕರನ್ನು ಎಲ್ಲ ವಯಸ್ಸಿನಲ್ಲಿ ಸಹ ಒಂದು ಮುಗ್ಧತೆಯನ್ನು ಬೆಳೆಸಿಕೊಳ್ಳುವಂತೆ ಮಾರ್ಗಸೂಚಿಯನ್ನು ನೀಡುವಂತಹ ಗುರುಗಳು ನಿಜವಾಗಲೂ ದೇಶ ಕಟ್ಟುವಂತಹ ತಪಸ್ವಿಗಳು . ಇಂದು ನಮ್ಮ ದೇಶಕ್ಕೆ ಬೇಕಾಗಿರುವುದು ಶಿಕ್ಷಣ ಶಿಕ್ಷಣ ಎಂದರೆ ಕೇವಲ ಅಕ್ಷರಮಾಲೆಯಲ್ಲ ಅದು ಜ್ಞಾನ ವಾಗಬೇಕು.
ಈ ಪೂಜ್ಯ ಸ್ಥಳದಲ್ಲಿ ತಂತ್ರಜ್ಞಾನವನ್ನು ತಿಳಿಸಿ ಕೊಡುವಂತಹ ಕಾರ್ಯವನ್ನು ಮಹಾಸ್ವಾಮಿಗಳು ಕೈಗೊಂಡಿರುವಂತಹದು ನಿಜಕ್ಕೂ ಸಂತಸವಾಗಿದೆ ಇದು ಪರಮಪೂಜ್ಯರ ಚಿಂತನೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಯುವಜನೋತ್ಸವ ಕಾರ್ಯಕ್ರಮಗಳು ದೇಶದಲ್ಲಿ ಯುವಕರಿಗೆ ಬಹುದೊಡ್ಡ ಶಕ್ತಿಯನ್ನು ನೀಡಬೇಕು. ಅವರಿಗೆ ಪ್ರೋತ್ಸಾಹಿಸಬೇಕು. ಯುವಕರು ದೇಶವನ್ನು ಕಟ್ಟುವಂತಹ ಕಾರ್ಯದಲ್ಲಿ ಯಶಸ್ವಿಯಾಗಬೇಕು ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇನ್ನು ಮುಂದೆ ಈ ರೀತಿಯ ಯುವಜನೋತ್ಸವ ಕಾರ್ಯಕ್ರಮವನ್ನು ಮಾಡಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಪ್ರೋತ್ಸಾಹಿಸುತ್ತೇನೆ ಎಂದು ಅವರು ತಿಳಿಸಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಚಿವರಾದ ಆರ್.ಅಶೋಕ್, ಕೆ.ಸಿ.ನಾರಾಯಣಗೌಡ, ಆಗರ ಜ್ಞಾನೇಂದ್ರ, ಸಂಸದೆ ಸುಮಲತಾ ಅಂಬರೀಶ್, ಶಾಸಕ ಸುರೇಶ್‍ಗೌಡ, ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಕಾರಿ ಅಶ್ವಥಿ, ಎಸ್.ಪಿ.ಎನ್. ಯತೀಶ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀ ಕ್ಷೇತ್ರದಲ್ಲಿ ವಿಜ್ಞಾನ ಕೇಂದ್ರದ ಗುದ್ದಲಿ ಪೂಜೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೆರವೇರಿಸಿದರು.

Articles You Might Like

Share This Article