Monday, April 13, 2026
Homeರಾಜ್ಯಉಪನ್ಯಾಸಕನ ಜೊತೆ ಅನೈತಿಕ ಸಂಬಂಧ ಆರೋಪ : ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಉಪನ್ಯಾಸಕನ ಜೊತೆ ಅನೈತಿಕ ಸಂಬಂಧ ಆರೋಪ : ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

Accused of having an immoral relationship with a lecturer: An offended student commits suicide

ಚಿತ್ರದುರ್ಗ,ಏ.2- ಉಪನ್ಯಾಸಕನೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಆರೋಪಕ್ಕೆ ಮನನೊಂದಿದ್ದ ಬಿಎಂಎಸ್‌‍ ಅಂತಿಮ ವರ್ಷದ ವಿದ್ಯಾರ್ಥಿನಿ ಅವಮಾನ ಸಹಿಸದೇ ಆತಹತ್ಯೆಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿ ನಡೆದಿದೆ.
ಲಿಖಿತ (22) ವಿಧ್ಯಾರ್ಥಿನಿ. ಈಕೆ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಂಎಸ್‌‍ ವ್ಯಾಸಂಗ ಮಾಡುತ್ತಿದ್ದರು.

ಕಾಲೇಜಿನ ಉಪನ್ಯಾಸಕ ಡಾ.ರಾಜು ಎಂಬುವರ ಪತ್ನಿ ಕಾಲೇಜಿಗೆ ಬಂದು ಯುವತಿ ಜೊತೆ ಗಲಾಟೆ ಮಾಡಿದ್ದರು. ಇದರಿಂದ ಲಿಖಿತ ತೀವ್ರ ನೊಂದಿದ್ದರು. ಉಪನ್ಯಾಸಕನ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಹಪಾಠಿಗಳು ಕೂಡ ಅಪಪ್ರಚಾರ ಮಾಡಿದ್ದರು.

ಅವಮಾನ ಸಹಿಸದೇ ಸಾಯಲು ನಿರ್ಧರಿಸಿದ್ದ ಆಕೆ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಸಾವಿಗೆ ಅನುಷಾ, ರಕ್ಷಾ, ಚಿನಯಿ, ಸಾಗರ್‌ ಹಾಗೂ ನಿಶಾರಾಜ್‌ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್ಪಿ ರಂಜಿತ್‌ ಕುಮಾರ್‌ ಬಂಡಾರೂ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಹೊಳಲ್ಕೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News