Monday, April 13, 2026
Homeರಾಷ್ಟ್ರೀಯಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ವಿಡಿಯೋ ಪ್ರಕರಣ : ಮೂವರು ಅಧಿಕಾರಿಗಳ ಅಮಾನತು

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ವಿಡಿಯೋ ಪ್ರಕರಣ : ಮೂವರು ಅಧಿಕಾರಿಗಳ ಅಮಾನತು

Three jail officials suspended after inmates released videos from central prison in Bengaluru

ಬೆಂಗಳೂರು, ಮಾ.29- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿಂದ ವಿಚಾರಣಾಧೀನ ಕೈದಿಗಳು ರೆಕಾರ್ಡ್‌ ಮಾಡಿ ಬಿಡುಗಡೆ ಮಾಡಿದ್ದಾರೆನ್ನಲಾದ ವೀಡಿಯೊಗಳಿಗೆ ಸಂಬಂಧಿಸಿದಂತೆ ಮೂವರು ಜೈಲು ಅಧಿಕಾರಿಗಳನ್ನುಅಮಾನತುಗೊಳಿಸಲಾಗಿದೆ.

ಜೈಲು ವಾರ್ಡನ್‌ಗಳಾದ ನಿರಂಜನ್‌ ಕಾಮತ್‌, ಹನುಮಂತಪ್ಪ ಹಡ್‌ಪದ್‌ ಮತ್ತು ಶಿವಾನಂದ್‌ ಕರ್ಲಬಟ್ಟಿ ಅವರನ್ನು ಡಿಜಿಪಿ (ಕಾರಾಗೃಹ) ಅಲೋಕ್‌ಕುಮಾರ್‌ ಅವರು ಅಮಾನತುಗೊಳಿಸಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ನಿರಂಜನ್‌ಕಾಮತ್‌, ಹನುಮಂತಪ್ಪ ಹಡ್‌ಪದ್‌ ಮತ್ತು ಶಿವಾನಂದ್‌ ಕರ್ಲಬಟ್ಟಿ ಎಂಬ ಮೂವರು ವಾರ್ಡನ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಲೋಕ್‌ಕುಮಾರ್‌ ಪಿಟಿಐಗೆ ತಿಳಿಸಿದ್ದಾರೆ.

ಸುದ್ದಿ ಫೋರ್ಟಲ್‌ ಬಿಡುಗಡೆ ಮಾಡಿದ ವೀಡಿಯೊಗಳಲ್ಲಿ, ಕೈದಿಗಳು ಪೊಲೀಸ್‌‍ ಮಹಾನಿರ್ದೇಶಕ (ಕಾರಾಗೃಹ) ಅಲೋಕ್‌ ಕುಮಾರ್‌ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೈದಿಗಳು ಮೊಬೈಲ್‌ ಫೋನ್‌ಗಳ ಲಭ್ಯತೆ, ಬೆಂಗಳೂರಿನಲ್ಲಿ ಮುಂಬರುವ ಐಪಿಎಲ್‌ ಪಂದ್ಯದ ಬಗ್ಗೆ ಹೇಳಿಕೆಗಳು ಮತ್ತು ಹಿರಿಯ ಅಧಿಕಾರಿಗಳಿಂದ ಫೋನ್‌ಗಳನ್ನು ಒದಗಿಸಲಾಗಿದೆ ಎಂದು ಆರೋಪ ಮಾಡುತ್ತಿರುವುದು ಕೇಳಿಬಂದಿದೆ ಎಂದು ಹೇಳಿದರು.

ಆದರೆ ಇದನ್ನು ಜೈಲು ಇಲಾಖೆ ನಿರಾಕರಿಸಿದೆ. ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಮೇಲ್ವಿಚಾರಣಾ ಕರ್ತವ್ಯದಲ್ಲಿದ್ದ ಜೈಲರ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುದ್ದಿ ಪೋರ್ಟಲ್‌ನಿಂದ ಮೂರು ವೀಡಿಯೊ ತುಣುಕುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ನಮ ಮಾಧ್ಯಮ ಸ್ನೇಹಿತರೊಬ್ಬರು ಆ ಕ್ಲಿಪ್ಪಿಂಗ್‌ಗಳನ್ನು ನನ್ನೊಂದಿಗೆ ಹಂಚಿಕೊಂಡರು. ಮುಖ್ಯ ಸೂಪರಿಂಟೆಂಡೆಂಟ್‌ ಅಂಶುಕುಮಾರ್‌ ಮತ್ತವರ ತಂಡವು ಕಿಡಿಗೇಡಿಗಳನ್ನು ಪತ್ತೆಹಚ್ಚಿ ಶೌಚಾಲಯದ ಕೊಠಡಿಯ ಪೈಪ್‌ನೊಳಗೆ ಬಚ್ಚಿಟ್ಟಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳು ದರ್ಶನ್‌ ಮತ್ತು ಅಭಿ, ಹೆಣ್ಣೂರು ಬಂಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದರೆ, ಕ್ಲಿಪ್‌ಗಳಲ್ಲಿರುವ ಧ್ವನಿಯನ್ನು ಜಿಪ್ಸಿನ್‌ ಡೇನಿಯಲ್‌ ಎಂದು ಗುರುತಿಸಲಾಗಿದೆ.

RELATED ARTICLES

Latest News