ಬೆಂಗಳೂರು,ಮಾ.29 – ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ರಾಜ್ಯದ ಅತಿ ದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರ ಮತ್ತೆ ವಿವಾದದ ಕೇಂದ್ರವಾಗಿದೆ. ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. ಜೈಲಿನೊಳಗೆ ಮೊಬೈಲ್,
ಟಿವಿ ಹಾಗೂ ನೆಟ್ ಫ್ಲಿಕ್‌್ಸ ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವಂತಹ ವಿಡಿಯೋವನ್ನ ಕೈದಿಗಳೇ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.ಈ ಸೌಲಭ್ಯಗಳನ್ನು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರೇ ಒದಗಿಸಿದ್ದಾರೆ ಎಂದು ಕೈದಿಗಳು ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋದಲ್ಲಿರುವವರು ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ ಎನ್ನುತ್ತಾ ಜೈಲಿನಲ್ಲೇ ಐಷಾರಾಮಿ ಜೀವನ ಬಗ್ಗೆ ವಿಡಿಯೋ ಮಾಡಿದ್ದಾರೆ. ಜೈಲಿನ ಒಳಗಿರುವ ಕಿಡಿಗೇಡಿಗಳೇ ಚಿತ್ರೀಕರಿಸಿದ್ದಾರೆ ಎನ್ನಲಾದ ಈ ವಿಡಿಯೋದಲ್ಲಿ, ಕೈದಿಗಳು ಮೊಬೈಲ್ ಫೋನ್ ಬಳಸುತ್ತಾ, ಟಿವಿಯಲ್ಲಿ ನೆಟ್‌ಫ್ಲಿಕ್‌್ಸ ವೀಕ್ಷಿಸುತ್ತಿರುವ ದೃಶ್ಯಗಳಿವೆ.
ಈ ವಿಡಿಯೋದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಈ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಡಿಜಿಪಿ ಅಲೋಕ್ ಕುಮಾರ್ ಅವರೇ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.ಕೈದಿಗಳು ಉದ್ದೇಶ ಪೂರ್ವಕವಾಗಿ ವಿಡಿಯೋ ಬಿಟ್ಟಿದ್ದಾರೆ. ದರ್ಶನ್, ಅಭಿ ಹಾಗೂ ಎಂಡ್ರೋಸ್ ಎಂಬುವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಹೆಣ್ಣೂರು ಬಂಡೆ ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿರೋ ದರ್ಶನ್ ಮತ್ತು ಅಭಿ ಸೇರಿಕೊಂಡು ಎಂಡ್ರೋಸ್ ಎಂಬಾತನಿಗೆ ಪ್ರಚೊದನೆ ಕೊಟ್ಟು ವಿಡಿಯೋ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ದೂರು ದಾಖಲಾಗಿದೆ. ಮೂವರನ್ನ ಕ್ವಾರಂಟೈನ್ ಸೆಲ್ ಗೆ ಶಿಫ್‌್ಟ ಮಾಡಲಾಗಿದೆ. ಅಲೋಕ್ ಕುಮಾರ್ ಅವರ ಹೆಸರನ್ನು ದುರುದ್ದೇಶಪೂರ್ವಕವಾಗಿ ಮುನ್ನಲೆಗೆ ತಂದಿದ್ದಾರೆ ಎನ್ನಲಾಗಿದೆ.
ಅಲೋಕ್ ಕುಮಾರ್ ಅವರು ಜೈಲು ಡಿಜಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪರಪ್ಪನ ಅಗ್ರಹಾರದಲ್ಲಿ ದಶಕಗಳಿಂದ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಮೊಬೈಲ್ ಫೋನ್ ಬಳಕೆ, ಹೊರಗಿನಿಂದ ಬರುವ ಅಕ್ರಮ ವಸ್ತುಗಳು ಹಾಗೂ ವಿಶೇಷ ಸೌಲಭ್ಯಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಈ ಖಡಕ್ ಕ್ರಮಗಳಿಂದ ಕಂಗೆಟ್ಟಿರುವ ಜೈಲಿನೊಳಗಿನ ಕಿಡಿಗೇಡಿಗಳು ಮತ್ತು ಅಕ್ರಮದ ಪಾಲುದಾರರು, ವ್ಯವಸ್ಥಿತವಾಗಿ ಅವರ ಹೆಸರಿಗೆ ಕಳಂಕ ತರಲು ಈ ಷಡ್ಯಂತ್ರ ರೂಪಿಸಿರುವ ಸಾಧ್ಯತೆ ದಟ್ಟವಾಗಿದೆ.
ಅಲೋಕ್ ಕುಮಾರ್ ಅವರ ವರ್ಚಸ್ಸನ್ನು ಕುಗ್ಗಿಸಲು ವಿಡಿಯೋವನ್ನು ಎಡಿಟ್ ಮಾಡಲಾಗಿದೆಯೇ ಅಥವಾ ಇದು ಹಳೆಯ ವಿಡಿಯೋವೇ ಎಂಬ ಬಗ್ಗೆ ಜೈಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋ ನಿಜವಾಗಿ ಜೈಲಿನಲ್ಲಿ ಚಿತ್ರೀಕರಿಸಿದ್ದ. ಅಥವಾ ಜೈಲಿನಂತೆ ಕಾಣುವ ಬೇರೆ ಯಾವುದೋ ಸ್ಥಳದಲ್ಲಿ ಸೆಟಪ್ ಮಾಡಿ ಚಿತ್ರೀಕರಿಸಲಾಗಿದೆಯೇ ಎಂಬ ಬಗ್ಗೆ ತೀವ್ರ ಅನುಮಾನ ವ್ಯಕ್ತವಾಗಿದೆ.
ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಜೈಲು ಅಧಿಕಾರಿಗಳು ಈಗಾಗಲೇ ಗಮನಹರಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಸೆಂಟ್ರಲ್ ಜೈಲಿನ ಒಳಗೆ ಜೈಲಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಬಳಿಕ ಕೈದಿಗಳನ್ನ ಅಕ್ಷರಗಳ ಆಧಾರದ ಮೇಲೆ ಬ್ಯಾರಕ್‌ಗೆ ಶಿಪ್‌್ಟ ಮಾಡಲಾಗಿದೆ.
