ಬೆಂಗಳೂರು,ಫೆ.14- ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಶೀಘ್ರವೇ ಗೃಹ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ ಬ್ಯಾಂಕ್‍ನಿಂದ ಸಾಲ ಪಡೆದವರ ಆಸ್ತಿ ಜಪ್ತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅಡಮಾನಕ್ಕಾಗಿ ನೀಡಿರುವ ದಾಖಲೆಗಳು ಬೇರೆಯವರಿಗೆ ಸೇರಿವೆ. ಸಾಲ ವಸೂಲಿ ಮಾಡುತ್ತಿದ್ದೇವೆ. ಆಸ್ತಿ ಜಪ್ತಿ ಮಾಡುತ್ತೇವೆ ಎನ್ನುತ್ತಾ ಸರ್ಕಾರ ಈವರೆಗೂ ಸುಳ್ಳು ಹೇಳುತ್ತಾ ಬಂದಿದೆ. ಇನ್ನೂ ತಡ ಮಾಡದೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು, ಸಿಒಡಿ, ಸಹಕಾರ ಇಲಾಖೆ ಮತ್ತು ಜÁರಿ ನಿರ್ದೇಶನಾಲಯ ಹಗರಣವನ್ನು ತನಿಖೆ ನಡೆಸಿವೆ. ಈವರೆಗೂ 1290 ಕೋಟಿ ವಂಚನೆಯನ್ನು ಪತ್ತೆ ಹಚ್ಚಿವೆ. ಸಿಒಡಿ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ ಸಿಬಿಐಗೆ ಒಪ್ಪಿಸಿದರೆ ತನಿಖೆ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ತಡೆ ಹಿಡಿಯಲಾಗಿತ್ತು.
ಮೂರು ವರ್ಷದಿಂದ ಸಿಒಡಿ ಮತ್ತು ಸಹಕಾರ ಇಲಾಖೆ ತನಿಖೆ ನಡೆಸಿ ಏನೇಲ್ಲಾ ಅವ್ಯವಹಾರ ನಡೆದಿದೆ ಎಂಬ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಆ ಮಾಹಿತಿಯನ್ನು ಸರ್ಕಾರ ಪರಿಶೀಲನೆ ಮಾಡುತ್ತಿದೆ. ಮುಂದಿನ ಹಂತದಲ್ಲಿ ಸಿಬಿಐ ತನಿಖೆ ನೀಡಲು ತಯಾರಾಗಿದ್ದೇವೆ. ಸಿಬಿಐ ಏನೇಲ್ಲಾ ದಾಖಲೆಗಳನ್ನು ಕೇಳುತ್ತಾರೆ ಎಂಬ ನಿರೀಕ್ಷೆ ಮೇಲೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದೇವೆ ಎಂದರು.
ಇಷ್ಟೇಲ್ಲಾ ತನಿಖೆ ಮಾಡಿದರೂ ವಂಚನೆ ಯಾರು ಮಾಡಿದ್ದಾರೆ ಎಂದು ಕಂಡು ಹಿಡಿಯಲಾಗುತ್ತಿಲ್ಲ. ಇಡಿಯವರೂ ವಿಚಾರಣೆ ಮಾಡಿದ್ದಾರೆ. ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಲಿದೆ ಎಂಬ ಮಾಹಿತಿಯನ್ನು ಪರಿಶೀಲನೆ ನಡೆಸಿದ್ದಾರೆ. ಗೃಹ ಇಲಾಖೆಗೆ ಎರಡು ಮೂರು ದಿನಗಳಲ್ಲಿ ಕಡತ ರವಾನೆಯಾಗಲಿದೆ. ನಂತರ ಸಿಬಿಐ ತನಿಖೆಗೆ ಒಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಿ.ಎ.ಶರವಣರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಐದು ಜಿಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ನೀಡುವ ವಿಷಯದಲ್ಲಿ ಕೇಳಿ ಬಂದಿದ್ದ, ಆರೋಪಗಳ ಕುರಿತು ಇಲಾಖೆ ಅಕಾರಿಗಳು ತನಿಖೆ ನಡೆಸಿದ್ದಾರೆ. ಧಾರವಾಡ,ವಿಜಯಪುರ, ಶಿವಮೊಗ್ಗ, ಕೋಲಾರ ಬ್ಯಾಂಕ್‍ಗಳಲ್ಲಿ ಆರೋಪ ಕೇಳಿ ಬಂದಿತ್ತು. ನಬಾರ್ಡ್ ನಿಯಮದ ಪ್ರಕಾರ ಸಾಲ ನೀಡಲಾಗಿದೆ. ಅವ್ಯವಹಾರ ನಡೆಯುವ ಸಾಧ್ಯತೆಗಳು ಕಡಿಮೆ ಎಂದರು.
ಐದು ಬ್ಯಾಂಕ್ ಹೊರತು ಪಡಿಸಿದರೆ ಉಳಿದೆಡೆ ನಬಾರ್ಡ್ ಮತ್ತು ನಮ್ಮ ಇಲಾಖೆ ನಿಯಮದ ಅನುಸಾರವೇ ಸಾಲ ನೀಡಲಾಗುತ್ತಿದೆ. ಸಾಫ್ಟವೇರ್ ಬದಲಾವಣೆ ಮಾಡಲಾಗಿದ್ದು, ಹೊಸ ವ್ಯವಸ್ಥೆಯಲ್ಲಿ ವಂಚನೆ ಮಾಡಲು ಸಾಧ್ಯವಿಲ್ಲ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೋಲಾರದ ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ ಎಂದರು.ನೋಟಿಸ್ ನೀಡಿದರೆ ಸಾಲುವುದಿಲ್ಲ. ಅಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶರವಣ ಒತ್ತಾಯಿಸಿದರು.
#StateGovt, #Recommend, #CBIProbe, #irregularities, #Gururaghavendracoop,