ಓಲಾ, ಊಬರ್ ನಿರ್ಬಂಧಕ್ಕೆ ಮಧ್ಯಂತರ ತಡೆ

Social Share

ಬೆಂಗಳೂರು, ಅ.14- ಒಲಾ- ಊಬರ್ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸರ್ಕಾರ ಯಾವುದೇ ರೀತಿಯ ಬಲವಂತವಾದ ಕ್ರಮ ಕೈಗೊಳ್ಳದಂತೆ ಇದೇ ವೇಳೆ ಸೂಚನೆ ನೀಡಿದ್ದು, ಇದರ ಜೊತೆಗೆ ಓಲಾ-ಊಬರ್ ಕಂಪೆನಿ ಪ್ರಯಾಣಿಕರ ಅನುಕೂಲಕರ ದರವನ್ನು ನಿಗ ಪಡಿಸಬೇಕೆಂದು ಏಕಸದಸ್ಯ ಪೀಠ ಇದೇ ವೇಳೆ ತಿಳಿಸಿದೆ.

ಪರವಾನಿಗೆ ಹಾಗೂ ನವೀಕರಣಕ್ಕೆ ಕಾಲವಕಾಶವನ್ನು ಕೂಡ ವಿಸ್ತರಿಸುವಂತೆ ಕೂಡ ನ್ಯಾಯಾಲಯ ಸೂಚಿಸಿದೆ. 2021ರ ಸಾರಿಗೆ ಇಲಾಖೆ ನಿಗ ಪಡಿಸಿದ ದರವನ್ನು ಪಾಲಿಸಬೇಕು. ಮತ್ತು ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಷರತ್ತು ವಿಧಿಸಿದೆ.

ಈ ಬಗ್ಗೆ ಮುಂದಿನ 10-15 ದಿನಗಳೊಳಗಾಗಿ ಸರ್ಕಾರ ವರದಿ ನೀಡಬೇಕು ಎಂದು ತಿಳಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಲಾಗಿದೆ.

Articles You Might Like

Share This Article