ಪುರಿ,(ಒಡಿಶಾ).ಜ.11-ತಂದೆ ಮತ್ತು ಮಲತಾಯಿ ಸೇರಿಕೊಂಡು 17 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿ ರಾತ್ರೋರಾತ್ರಿ ಮೃತದೇಹವನ್ನು ಸುಟ್ಟುಹಾಕಿರುವ ಘಟನೆ ಪುರಿ ಜಿಲ್ಲೆಯ ಗೋಪ್ ಪ್ರದೇಶದಲ್ಲಿ ಬಳಕಿಗೆ ಬಂದಿದೆ.
ಮೃತಳನ್ನು ಸೊನಾಲಿ ಮೊಹರಾಣ ಎಂದು ಗುರುತಿಸಲಾಗಿದೆ. ಆಕೆಯ ಹಿರಿಯ ಸಹೋದರಿ ರಂಜಿತಾ ಮೊಹರಾಣ ನೀಡಿದ ದೂರಿನ ಆಧಾರದ ಮೇಲೆ ಗೋಪ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಂದೆ ದುರ್ಗಾಚರಣ ಮೊಹರಾಣನನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ 2018ರಲ್ಲಿ ದುರ್ಗಾಚರಣ್ನ ಮೊದಲ ಹೆಂಡತಿ ಮೃತಪಟ್ಟಿದ್ದರು ನಂತರ 2020ರಲ್ಲಿ ಮಮತಾ ಓಜಾ ಎಂಬುವಳನ್ನು ವಿವಾಹವಾಗಿದ್ದರು. ಬಳಿಕ ಮಲತಾಯಿ ಮತ್ತು ಆಕೆಯ ಸಹೋದರ ಜೀವನ್ ಓಜಾ ಸೇರಿಕೊಂಡು ಸೋನಾಲಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ ಇದಕ್ಕೆ ಪಾಪಿ ತಂದೆ ಕೂಡ ಬೆಂಬಲ ನೀಡುತ್ತಿದ್ದ ಎನ್ನಲಾಗಿದೆ.
ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು
ಆರೋಪಿಗಳು ಕಳೆದ ಸೋಮವಾರ ತಡರಾತ್ರಿಯೇ ಸೋನಾಲಿಯನ್ನು ಕೊಂದು ಸಾಕ್ಷ್ಯನಾಶಕ್ಕಾಗಿ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಚಿತಾಭಸ್ಮವನ್ನು ಬಚ್ಚಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂಗಿ ಸೋನಾಲಿ ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಅಕ್ಕ ರಂಜಿತಾ ಗೋಪ್ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಬೆಚ್ಚಬಿದ್ದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
Step mother, husband, kill, daughter, Puri,