5 ವರ್ಷಗಳ ನಂತರ ನಾಯಕ ಪಟ್ಟ ಅಲಂಕರಿಸಿದ ಸ್ಟೀವನ್ ಸ್ಮಿತ್

Social Share

ನವದೆಹಲಿ, ಮಾ. 14- ಬಾರ್ಡರ್- ಗವಾಸ್ಕರ್ ಸರಣಿ ಯಲ್ಲಿ 2-1 ಅಂತರದಿಂದ ಟ್ರೋಫಿ ಕಳೆದುಕೊಂಡಿರುವ ಆಸ್ಟ್ರೇಲಿಯಾ ಈಗ ಏಕದಿನ ಸರಣಿಯತ್ತ ಚಿತ್ತ ಹರಿಸಿದ್ದು ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಭಾರತ ವಿರುದ್ಧ ಟೆಸ್ಟ್ ಸರಣಿಯ ವೇಳೆಯೇ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡವನ್ನು ತೊರೆದ ನಂತರ ಕಾಂಗೂರು ಪಡೆಯ ಸಾರಥ್ಯ ವಹಿಸಿ ತಮ್ಮ ನಾಯಕತ್ವದ ಕೌಶಲ್ಯ ಬಳಿಸಿ ಇಂಧೋರ್ ಟೆಸ್ಟ್ ಗೆದ್ದು, ಅಹಮದಾಬಾದ್ ಟೆಸ್ಟ್‍ನಲ್ಲಿ ಡ್ರಾ ಸಾಧಿಸುವಲ್ಲಿ ಸಹಕರಿಸಿದ್ದ ಸ್ಟೀವನ್ ಸ್ಮಿತ್ ಅವರಿಗೆ ಏಕದಿನ ಸಾರಥ್ಯವನ್ನು ವಹಿಸಲಾಗಿದೆ.

ಕಮ್ಮಿನ್ಸ್‍ಗೆ ವಿಶ್ರಾಂತಿ:
ಪ್ಯಾಟ್ ಕಮ್ಮಿನ್ಸ್ ಅವರ ತಾಯಿ ಇತ್ತೀಚೆಗೆ ನಿಧನರಾಗಿರುವುದರಿಂದ ಕುಟುಂಬದವರೊಂದಿಗೆ ಪ್ಯಾಟ್ ಕಮ್ಮಿನ್ಸ್ ಇರುವುದು ಅವಶ್ಯಕವಾಗಿರುವುದರಿಂದ ಏಕದಿನ ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಹೇಜಲ್‍ವುಡ್ ಅಲಭ್ಯ:
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದ ಬಳಲಿ ಸರಣಿಯಿಂದ ಹೊರಗುಳಿದಿದ್ದ ತಂಡದ ಪ್ರಮುಖ ವೇಗಿ ಜೋಸ್ ಹೇಜಲ್‍ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಮರಳಿದ ಮ್ಯಾಕ್ಸ್‍ವೆಲ್:
ಗಾಯದ ಸಮಸ್ಯೆಯಿಂದ ಬಳಲಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾ ಸ್ಟಾರ್ ಅಲ್‍ರೌಂಡರ್ ಗ್ಲೆನ್‍ಮ್ಯಾಕ್ಸ್‍ವೆಲ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಿದ್ದರೆ, ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ಆರಂಭಿಕ ಸ್ಪೋಟಕ ಆಟಗಾರ ಡೇವಿಡ್‍ವಾರ್ನರ್‍ಗೆ ಸ್ಥಾನ ಕಲ್ಪಿಸಲಾಗಿದೆ.

ತಂಡ ಇಂತಿದೆ:
ಸ್ಟೀವ್ ಸ್ಮಿತ್ (ಸಿ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆP್ಸï ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆ ರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‍ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ಪಂದ್ಯದ ವಿವರ:
ಮೊದಲ ಪಂದ್ಯ: ಮಾರ್ಚ್ ್ 17- ವಾಂಖೆಡೆ ಕ್ರೀಡಾಂಗಣ- ಮುಂಬೈ
ಎರಡನೇ ಪಂದ್ಯ: ಮಾ. 19- ವಿಶಾಖಪಟ್ಟಣ
ಮೂರನೇ ಪಂದ್ಯ: ಮಾ.22- ಚೆನ್ನೈ

Steven Smith, captain, Australia, ODI, series, India,

Articles You Might Like

Share This Article