ನವದೆಹಲಿ,ಜ.14- ಚಲನಚಿತ್ರ ದಂತಕಥೆ ಸ್ಟೀವನ್ಸ್ಟೀಲ್ಬರ್ಗ್ ಅವರು ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಲನಚಿತ್ರದ ನಾಟು ನಾಟು ಸಾಂಗ್ಗೆ ಫಿದಾ ಆಗಿದ್ದಾರಂತೆ.ಈ ವಿಷಯವನ್ನು ಸ್ವತಃ ನಾಟು ನಾಟು ಹಾಡಿನ ಸಂಯೋಜಕ ಎಂ ಎಂ ಕಿರವಾಣಿ ಅವರೇ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಾಟು ನಾಟು ಹಾಡು ಲಾಸ್ ಏಂಜಲಿಸ್ನಲ್ಲಿ ನಡೆದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಭಾಜನವಾಗಿತ್ತು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋದಾಗ ನಾನು ಚಲನಚಿತ್ರ ದಂತಕಥೆ ಸ್ಟೀವನ್ ಸ್ಟೀಲ್ಬರ್ಗ್ ಅವರು ಭೇಟಿಯಾಗಿದ್ದೆ.
ಅವರ ದಿ ಫ್ಯಾಬೆಲ್ಮ್ಯಾನ್ಸ್ ಚಿತ್ರ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅಂತಹ ವಿಶ್ವವಿಖ್ಯಾತ ನಿರ್ದೇಶಕರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದು ಕಿರವಾಣಿ ಬರೆದುಕೊಂಡಿದ್ದಾರೆ.
ಹೃದಯಘಾತದಿಂದ ಸಂಸದ ಸಾವು, ಭಾರತ್ ಜೋಡೋ ಯಾತ್ರೆ ಸ್ಥಗಿತ
ಸ್ಟೀಲ್ಬರ್ಗ್ ಅವರ ಭೇಟಿಯನ್ನು ದೇವರ ಭೇಟಿ ಎಂದು ಉಲ್ಲೇಖಿಸಿರುವ ಕಿರವಾಣಿ ಅವರು ಅಂತಹ ಮಹಾನ್ ವ್ಯಕ್ತಿ ನಾಟು ನಾಟು ಸಾಂಗ್ಗೆ ಫಿದಾ ಆಗಿದ್ದರು ಅದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡರು ಎಂದು ಟ್ವಿಟರ್ನಲ್ಲಿ ರಾಜಮೌಳಿ, ಸ್ಟೀಲ್ಬರ್ಗ್ ಅವರೊಂದಿಗಿರುವ ಚಿತ್ರ ಹಂಚಿಕೊಂಡಿದ್ದಾರೆ.
ಸ್ಟೀಲ್ಬರ್ಗ್ ಅವರು ನನ್ನ ಕಿವಿ ಬಳಿಗೆ ಬಂದು ಮೆಲ್ಲನೆ ನಾಟು ನಾಟು ಹಾಡು ತುಂಬಾ ಸೋಗಸಾಗಿದೆ ಎಂದಾಗ ಅದನ್ನು ನನ್ನಿಂದ ನಂಬಲಾಗಲಿಲ್ಲ ಎನ್ನುವುದನ್ನು ಅವರು ಬರೆದುಕೊಂಡಿದ್ದಾರೆ.
#Rajamouli, #StevenSpielberg, #RRRSong, #NaaatuNaatu,