ಪಂಚರಾಜ್ಯಗಳ ಫಲಿತಾಂಶ : ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ

Social Share

ಮುಂಬೈ,ಮಾ.10- ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿದೆ.
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಷೇರು ಮಾರುಕಟ್ಟೆ ಏರುಮುಖದತ್ತ ಸಾಗಿತು. ಸೆನ್‍ಸೆಕ್ಸ್ ಸಾವಿರ ಅಂಕಗಳ ಏರಿಕೆ ಕಂಡು ಬಂದಿತ್ತು. ನಿಫ್ಟಿಯಲ್ಲಿ ಏರಿಕೆಯಾಗಿದೆ.
ಉತ್ತರ ಪ್ರದೇಶ, ಪಂಜಾಬ್, ಉತ್ತರಖಾಂಡ, ಗೋವಾ, ಮಣಿಪುರ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಬೆಳಗ್ಗೆ ಬಹಿರಂಗಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿತ್ತು.
ಇದರಿಂದ ಅನೇಕ ಹೂಡಿಕೆದಾರರು ದಿನದ ಆರಂಭದಲ್ಲೇ ಲಾಭಗಳಿಕೆ ಮಾಡಿದ್ದಾರೆ. ಸೂಚ್ಯಂಕ 1.091.59 ಪಾಯಿಂಟ್‍ಗಳಿಂದ 5573892ಕ್ಕೆ ನತ್ತು ನಿಫ್ಟಿ 295.50 ಪಾಯಿಂಟ್‍ಗಳಿಂದ 16440.85ಕ್ಕೆ ಏರಿಕೆಯಾಗಿದೆ.

Articles You Might Like

Share This Article