ಕಳವು ಮೊಬೈಲ್ ಪತ್ತೆ ಕಾರ್ಯಾಚರಣೆ ಚುರುಕು

Social Share

ಬೆಂಗಳೂರು,ಮಾ.11- ಕೇಂದ್ರ ಸರ್ಕಾರದ ಸಿಇಐಆರ್ ವೆಬ್‍ಪೋರ್ಟಲ್ ನೆರವಿನಿಂದ ಕಳೆದು ಹೋಗಿರುವ ಮೊಬೈಲ್ ಫೋನ್‍ಗಳ ಪತ್ತೆ ಕಾರ್ಯ ಚುರುಕುಗೊಂಡಿದ್ದು, ಸಿಸಿಬಿ ಪೊಲೀಸರು 18 ಲಕ್ಷ ರೂ. ಮೌಲ್ಯದ 112 ಮೊಬೈಲ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇ-ಲಾಸ್ಟ್ ನೋಂದಣಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಷ್ಟೆ ಅಲ್ಲದೆ, ತಮಿಳುನಾಡು, ರಾಜಸ್ಥಾನ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಸಕ್ರಿಯವಾಗಿದ್ದ ಮೊಬೈಲ್‍ಗಳನ್ನು ಪತ್ತೆ ಹಚ್ಚಲಾಗಿದೆ. ದುಬಾರಿ ಬೆಲೆಯ ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ

ಇತ್ತೀಚಿನ ದಿನಗಳಲ್ಲಿಮೊಬೈಲ್ ಕಳ್ಳತನ ದೊಡ್ಡ ಸಮಸ್ಯೆಯಾಗಿದೆ. ಕಳೆದ ಹೋಗಿದ್ದ ಮೊಬೈಲ್‍ಗಳು ಮತ್ತೆ ಸಿಗುವುದೇ ಇಲ್ಲ ಎಂಬ ಹತಾಶೆ ಇದ್ದ ಕಾಲದಲ್ಲಿ ಶುರುವಾಗಿರುವ ಸಿಇಐಆರ್ ಪೋರ್ಟಲ್ ವರದಾನವಾಗಿದೆ.
ಪೊಲೀಸರು ಮೊಬೈಲ್ ಪತ್ತೆ ಕಾರ್ಯಾಚರಣೆಯನ್ನು ಗಂಭಿರವಾಗಿ ಪರಿಗಣಿಸಿದ್ದಾರೆ. ಕಳುವಾಗಿದ್ದ ಅಥವಾ ಕಳೆದು ಹೋಗಿದ್ದ ಮೊಬೈಲ್‍ಗಳು ಎಲ್ಲೆ ಸಕ್ರಿಯವಾಗಿದ್ದರು ಪತ್ತೆ ಹಚ್ಚಲಾಗುತ್ತಿದೆ.

ಕಳ್ಳತನವಾಗಿದ್ದ ಮೊಬೈಲ್‍ಗಳನ್ನು ಖರೀದಿಸಿದ್ದವರು ಇಕ್ಕಟ್ಟಿಗೆ ಸಿಲುಕಿದ್ದು, ಮೊಬೈಲ್ ವಾಪಾಸ್ ನೀಡಿ ಕಾನೂನಿನ ಕುಣಿಕೆಯಿಂದ ಪಾರಾಗಲು ಪರದಾಡುತ್ತಿದ್ದಾರೆ. ಮತ್ತೆ ಕಳವು ಎಲೆ ಕ್ಟ್ರಾನಿಕ್ಸ್ ಮಾಲುಗಳನ್ನು ಖರೀದಿಸಬಾರದು ಎಂಬ ಪಾಠ ಕಲಿಯುತ್ತಿದ್ದಾರೆ.

ಸಿಇಐಆರ್ ಬಗ್ಗೆ ಜನರಲ್ಲಿ ನಿಧಾನಕ್ಕೆ ಜಾಗೃತಿ ಮೂಡುತ್ತಿದ್ದು, ಜನರ ದೂರು ಆಧರಿಸಿ ಕಳವು ಗ್ಯಾಜೆಟ್ಸ್‍ಗಳನ್ನು ವಶ ಪಡಿಸಿಕೊಂಡು ಮರಳಿಸುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಮುಟ್ಟಿನ ರಕ್ತಕ್ಕಾಗಿ ಮಹಿಳೆಗೆ ಒತ್ತಾಯ : 7 ಜನರ ವಿರುದ್ಧ ಕೇಸ್

ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ಸಿಸಿಬಿಯ ಟೆಕ್ನಿಕಲ್ ಸಪೋರ್ಟ್ ಸೆಂಟರ್‍ನ ವಿಶೇಷ ತಂಡವನ್ನು ರಚಿಸಿ ಸಿಇಐಆರ್ ಪೋರ್ಟಲ್ ಮತ್ತು ಇಲಾಸ್ಟ್ ದತ್ತಾಂಶವನ್ನು ಬಳಸಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಪೋನ್‍ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Stolen, mobile, operation, 112 mobiles, worth,

Articles You Might Like

Share This Article