ಔರಂಗಾಬಾದ್,ಫೆ.8- ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ. ಶಿವಸಂವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಶಿವಸೇನೆ ಮುಖಂಡ ಅಂಬಾದಾಸ್ ಧಾನ್ವೆ ಖಚಿತಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಕೆಸಿಆರ್ ಪುತ್ರಿ ಕವಿತಾ ಪರಿಚಯಸ್ಥನ ಬಂಧನ
ಆದಿತ್ಯ ಠಾಕ್ರೆ ಅವರು ವೈಜಾಪುರದ ಮಹಲ್ಗಾಂವ್‍ನಲ್ಲಿ ಶಿವಸಂವಾದ ಯಾತ್ರೆಯಲ್ಲಿದ್ದರು ಮತ್ತು ಅದೇ ಸಮಯದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಮೆರವಣಿಗೆಯೂ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೆರವಣಿಗೆ ನಡೆಸುತ್ತಿದ್ದವರು ಮತ್ತು ಶಿವಸೇನೆ ಬೆಂಗಾವಲು ಪಡೆಯ ನಡುವೆ ಬಿರುಕು ಮೂಡಿಸಲು ಸಮಾಜ ವಿರೋಧಿಗಳು ಕಲ್ಲು ಎಸೆದಿದ್ದಾರೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಆರೋಪಿಸಿದ್ದಾರೆ.
ಹಾಸನದಲ್ಲಿ ಸೈಲೆಂಟಾದ ಭವಾನಿ ರೇವಣ್ಣ..!
ನಾವು ಸ್ಥಳದಿಂದ ಹೊರಡುವಾಗ ಬೆಂಗಾವಲು ಪಡೆ ಮೇಲೆ ಕೆಲವು ಕಲ್ಲುಗಳು ತೂರಿದವು, ಕಾರಿನ ಒಳಗೆ ಕಲ್ಲು ಬಿದ್ದಿತು, ಆಗ ಕೆಲವರು ಸ್ಥಳೀಯ ಶಾಸಕ ರಮೇಶ ಬೋರ್ನಾರೆ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
Stones, pelted, Aaditya Thackeray, car, Aurangabad,