ಕೃಷ್ಣನ ವಿಗ್ರಹದೊಂದಿಗೆ ತಾಜ್ ಮಹಲ್ ಪ್ರವೇಶಿಸಿದ ಯುವಕ

Social Share

ಆಗ್ರಾ, ಆ.30 – ರಾಜಸ್ಥಾನದ ಜೈಪುರದ ಪ್ರವಾಸಿ ಯುವಕ ಕೃಷ್ಣನ ವಿಗ್ರಹದೊಂದಿಗೆ ತಾಜ್ ಮಹಲ್ ಪ್ರವೇಶಿಸುವುದನ್ನು ಸಿಬ್ಬಂದಿ ತಡೆದು ನಿಲಿಸಿ ವಾಪಸ್ ಕಳಿಸಿದ ಘಟನೆ ನಡೆದಿದೆ. ಸ್ಥಳೀಯ ಹಿಂದೂ ಸಂಘಟನೆಗಳು ಪ್ರವಾಸಿಗರನ್ನು ತಡೆದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸïಐ), ಆಗ್ರಾ ವೃತ್ತದ ಅಕಾರಿಯೊಬ್ಬರು, ಈ ಬಗ್ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಕಾರಿಗಳೊಂದಿಗೆ ವಿಚಾರಿಸುವುದಾಗಿ ತಿಳಿಸಿದ್ದಾರೆ.

ಪ್ರವಾಸಿ ಗೌತಮ್ ತಾಜ್ ಮಹಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೃಷ್ಣನ ಮೂರ್ತಿಯೊಂದಿಗೆ ಮಥುರಾ ಮತ್ತು ವೃಂದಾವನಕ್ಕೆ ಭೇಟಿ ನೀಡಿದ್ದೇನೆ. ಆದರೆ ಇಲ್ಲಿ ಅವರು ವಿಗ್ರಹವಿಲ್ಲದೆಯೇ ಪ್ರವೇಶಿಸಲು ಹೇಳಿದರು ಎಂದು ಹೇಳಿದರು.

ತಾಜ್ ಸಂರಕ್ಷಣಾ ಸಹಾಯಕ (ಸಿಎ) ಪ್ರಿನ್ಸ್ ವಾಜಪೇಯಿ ಮಾತನಾಡಿ ನನಗೂ ಈ ಬಗ್ಗೆ ವೀಡಿಯೊ ಸಿಕ್ಕಿದೆ. ಆದರೆ ಘಟನೆ ಯಾವಾಗ ನಡೆಯಿತುಬ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಪರಾಶರ ಮಾತನಾಡಿ, ಹಿಂದೂ ದೇವತೆಗಳಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

Articles You Might Like

Share This Article