Saturday, September 23, 2023
Homeಅಂತಾರಾಷ್ಟ್ರೀಯಲಿಬಿಯಾದಲ್ಲಿ ಭಾರಿ ಚಂಡಮಾರುತ: 2000 ಮಂದಿ ಬಲಿ, ಸಾವಿರಾರು ಮಂದಿ ನಾಪತ್ತೆ

ಲಿಬಿಯಾದಲ್ಲಿ ಭಾರಿ ಚಂಡಮಾರುತ: 2000 ಮಂದಿ ಬಲಿ, ಸಾವಿರಾರು ಮಂದಿ ನಾಪತ್ತೆ

- Advertisement -

ಕೈರೋ, ಸೆ. 12- ಲಿಬಿಯಾದಲ್ಲಿ ಸಂಭವಿಸಿದ ಡೇನಿಯಲ್ ಚಂಡಮಾರುತ ಹಾಗೂ ಭಾರಿ ಪ್ರವಾಹಕ್ಕೆ ಸಿಲುಕಿ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೂರ್ವ ಲಿಬಿಯಾ ಸರ್ಕಾರದ ಒಸಾಮಾ ಹಮದ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ ಮರ್ಸ ಟೆಲಿವಿಷನ್‍ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ, ಪ್ರಧಾನಮಂತ್ರಿ ಒಸಾಮಾ ಹಮದ್ ಅವರು ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಹೇಳಿದರು. ಜೊತೆಗೆ ಅವರು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿರುವುದಾಗಿ ಪ್ರಕಟಿಸಿದ್ದಾರೆ.

- Advertisement -

ಡೇನಿಯಲ್ ಚಂಡಮಾರುತದ ನಂತರ ಪ್ರವಾಹವು ವಿನಾಶವನ್ನುಂಟು ಮಾಡಿದ್ದು, ಅದನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಚಂಡಮಾರುತ ಹಾಗೂ ಭಾರಿ ಪ್ರವಾಹದ ಪರಿಣಾಮ ಅಣೆಕಟ್ಟುಗಳು ಒಡೆದು ಹೋಗಿದ್ದು, ಉತ್ತರ ಆಫ್ರಿಕಾದ ರಾಷ್ಟ್ರದ ಪೂರ್ವದಲ್ಲಿರುವ ಹಲವಾರು ಕರಾವಳಿ ನಗರಗಳ ಸಂಪೂರ್ಣ ಪ್ರದೇಶಗಳು ಕೊಚ್ಚಿಹೋಗಿವೆ. ಡರ್ನಾದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಪೂರ್ವದ ಬೈಡಾ ನಗರದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಂದಿನ ಪಂಚಾಂಗ ಮತ್ತು ಇಂದಿನ ರಾಶಿಭವಿಷ್ಯ(12-09-2023)

ಬೆಂಗಾಜಿ, ಸುಸಾ, ಬೈಡಾ, ಅಲ್-ಮಾರ್ಜ್ ಮತ್ತು ಡರ್ನಾ ನಗರಗಳ ಮೇಲೆ ಪರಿಣಾಮ ಬೀರಿತು. ಡರ್ನಾ ಹೊರತುಪಡಿಸಿ, ಪೂರ್ವ ನಗರವಾದ ಬೈಡಾದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈಶಾನ್ಯ ಲಿಬಿಯಾದ ಸುಸಾ ನಗರದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಶಾಹತ್ ಮತ್ತು ಒರ್ಮ ಅಲ-ಮೊಖ್ತಾರ್ ನಗರಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.

ರಾತ್ರಿಯಿಡೀ ಅಪ್ಪಳಿಸಿದ ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಚಂಡಮಾರುತದ ಮನ್ನೆಚ್ಚರಿಕೆಯಾಗಿ ಶನಿವಾರವೇ ಶಾಲಾ, ಕಾಲೇಜು ತರಗತಿಗಳಿಗೆ ರಜೆ ನೀಡಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.

#StormDaniel, #Wreaks, #Havoc, #Libya, #Over2000FearedDead,

- Advertisement -
RELATED ARTICLES
- Advertisment -

Most Popular