ಪೊಲೀಸ್ ನೇಮಕಾತಿಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ : ಸಿಎಂ

Social Share

ಬೆಂಗಳೂರು,ಅ.21-ಪೊಲೀಸ್ ಇಲಾಖೆಯಲ್ಲಿ ಇನ್ನು ಮುಂದೆ ಯಾವುದೇ ಹಂತದ ನೇಮಕಾತಿಗಳು ನಡೆಯುವಾಗ ಅಕ್ರಮಗಳಿಗೆ ಅವಕಾಶ ಕೊಡದೆ ಪಾರದರ್ಶಕವಾಗಿ ಪ್ರಕ್ರಿಯೆಯನ್ನು ನಡೆಸ ಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ಮೀಸಲು ಪಡೆದ ಕೇಂದ್ರ ಸ್ಥಾನದಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಪಗುಚ್ಛ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ಯಾವುದೇ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯದಂತೆ ತಡೆಯುವುದು ಸರ್ಕಾರ ಮತ್ತು ಇಲಾಖೆಗೆ ಬಹು ದೊಡ್ಡ ಸವಾಲಾಗಿದೆ. ನಮ್ಮ ಸರ್ಕಾರ ಬದ್ದತೆ ತೋರಿಸುತ್ತದೆ ಎಂದು ಅಭಯ ನೀಡಿದರು.

ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ತರಬೇತಿ ಹಂತದಲ್ಲೇ ಸಿಬ್ಬಂದಿಗಳಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು, ಜೊತೆಗೆ ಸೈಬರ್ ಕ್ರೈಂ ಪರಿಚಯಿಸುವ ಕೆಲಸವಾಗಬೇಕು. ಇದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡಲು ಸಿದ್ದವಿದೆ. ನಮಗೆ ನಿಮ್ಮಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಭಯೋತ್ಪಾದನೆ ದಮನ ಮಾಡಲು ಸಾಮಾನ್ಯ ಕಾನ್ಸ್‍ಟೇಬಲ್ ಕೂಡ ಅರಿವಿನಿಂದ ಕೆಲಸ ಮಾಡಬೇಕು. ದುಷ್ಟ ಶಕ್ತಿಗಳು ಸಮಾಜದ ಎಲ್ಲ ರಂಗದಲ್ಲೂ ಒಳ ಹೊಕ್ಕಿರುವುದರಿಂದ ಸಾಮಾನ್ಯ ಕಾನ್ಸ್ ಟೇಬಲ್‍ಗೂ ಅದರ ಅರಿವಿರಬೇಕಿದೆ ಎಂದು ಸಲಹೆ ಮಾಡಿದರು.

ಪೊಲೀಸರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ನಮ್ಮ ಸರ್ಕಾರ ಬೇರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೇಮಕಾತಿ ಪ್ರಮಾಣವು ಹೆಚ್ಚಳವಾಗಿದೆ. ಪ್ರತಿ ವರ್ಷ ನಾಲ್ಕು ಐದು ಸಾವಿರ ಪೊಲಿಸರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪೊಲೀಸ್ ಇಲಾಖೆಗೆ ದೊಡ್ಡ ಇತಿಹಾಸವಿದೆ. ಅನೇಕ ಸಂದರ್ಭದಲ್ಲಿ ಪೊಲೀಸರುತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಮಾಜದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ದೇಶ ಹಾಗೂ ವಿದೇಶಿ ದುಷ್ಟ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿವೆ. ಕ್ರೈಮ್ ಲೀಡ್ಸ್ ಲಾ ಅಂತ ಇದೆ. ಲಾ ಲೀಡ್ಸ್ ಕ್ರೈಮ್ ಅಂತ ಆಗಬೇಕು.

ಕಳೆದ ಒಂದು ವರ್ಷದಲ್ಲಿ ಲೀಲಿಸ್ ಠಾಣೆಗಳ ನಿರ್ಮಾಣ ಹೆಚ್ಚಾಗಿದೆ. ಒಂದು ವರ್ಷದಲ್ಲಿ ಎಲ್ಲ ಪೊಲಿಸ್ ಸ್ಟೇಶನ್‍ಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಇನ್ಸ್ ಪೆಕ್ಟರ್ ಮತ್ತು ಡಿವೈ ಎಸ್ಪಿ ಕೆಡರ್ ಗೆ ತರಬೇತಿ ಅಗತ್ಯವಿದೆ ಅದಕ್ಕೆ ಪ್ರತ್ಯೇಕ ತರಬೇತಿ ಕಮಾಂಡ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳೀದರು.

ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಹೈಕೋರ್ಟ್ ಆದೇಶ

ಪೊಲೀಸರ ತ್ಯಾಗ ಬಲಿದಾನ ಜನರಿಗೆ ತಿಳಿಸಲು ಪೊಲಿಸರ ಸಾಧನೆ ಜನರಿಗೆ ತಿಳಿಸಲು ಪೊಲೀಸ್ ಮ್ಯೂಜಿಯಂ, ಎಟಿಎಸ್ ಬಲಪಡಿಸುವುದು, ಜೈಲುಗಳ ಸಂಖ್ಯೆ ಹಾಗೂ ಸಾಮಥ್ರ್ಯ ಹೆಚ್ಚಿಸುವ ಕೆಲಸ ಮಾಡಲಾಗುವುದು. ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪೊಲೀಸರಿಗೆ ಆಧುನಿತ ಶಸ್ತ್ರಾಸ್ತ್ರದ ಅಗತ್ಯವಿದೆ. ಹಿರಿಯ ಅಕಾರಿಗಳು ಹೆಚ್ಚು ದಕ್ಷರಾಗಿ ಕಾರ್ಯ ನಿರ್ವಹಿಸಿದರೆ ಕೆಳ ಹಂತದ ಅಧಿಕಾರಿಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪ್ರತಿಯೊಬ್ಬರು ಚಾಚುತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.

ಪೊಲೀಸರು ತಮ್ಮ ಕರ್ತವ್ಯ ಧರ್ಮವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೀರಿ. ಅದನ್ನು ಸರ್ಕಾರ ಮತ್ತು ಸಮಾಜ ಗೌರವಿಸುತ್ತದೆ. ತಮ್ಮ ಹಿಂದೆ ಕುಟುಂಬ ಮಕ್ಕಳು ಇದ್ದಾರೆ ಅದನ್ನು ಆಳುವವರು ಗಮನಿಸಬೇಕಾಗುತ್ತದೆ. ಪೊಲಿಸರು ಇಲ್ಲದಿದ್ದರೆ ಎಷ್ಟು ಸಮಸ್ಯೆ ಆಗುತ್ತದೆ ಎನ್ನುವುದು ಗೊತ್ತಿದೆ. ಹೀಗಾಗಿ ಪೊಲಿಸರ ಪಾತ್ರ ಮುಖ್ಯವಾಗಿದೆ.

ಪೊಲೀಸರ ತ್ಯಾಗ ವ್ಯರ್ಥವಾಗಬಾರದು. ಅದು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವುದು ನಮ್ಮ ಕೆಲಸ ನಮ್ಮ ಸರ್ಕಾರ ಪೊಲೀಸರ ಜೊತೆ ಇರುತ್ತದೆ ಎಂದು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಜರಿದ್ದರು.

Articles You Might Like

Share This Article