ಕಾಲೇಜಿನಲ್ಲೇ ವಿದ್ಯಾರ್ಥಿನಿಗೆ ಇರಿದು ಕೊಲೆ

Social Share

ಬೆಂಗಳೂರು,ಜ.2- ಕಾಲೇಜಿನಲ್ಲೇ ವಿದ್ಯಾರ್ಥಿನಿಯನ್ನು ಚಾಕುವಿಂದ ಇರಿದು ಕೊಲೆ ಮಾಡಿರುವ ಘಟನೆ ನಗರ ಹೊರವಲಯದ ರಾಜಾನುಕುಂಟೆಯಲ್ಲಿ ನಡೆದಿದೆ.

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು ವಿದ್ಯಾರ್ಥಿನಿ ಲಯಸ್ಮಿತಳನ್ನು ಕೊಂದವ ಕೋಲಾರ ಮೂಲದವನು ,ಆತನೂ ಕೂಡ ಅದೇ ಚಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಕಾಲೇಜಿನ ಭಧ್ರತಾ ಸಿಬಂದ್ದಿ ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ಕೆರೆಕೊಂಡು ಹೋಗುವಷ್ಠರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ.ಪ್ರೀತಿ ವಿಚಾರದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊ ಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಸ್ತುತ ಕೊಲೆ ಮಾಡಿರುವ ಯುವಕನನ್ನು ಬಿ.ಟೆಕ್ ವಿದ್ಯಾರ್ಥಿ ಪವನ್ ಎಂದು ತಿಳಿದು ಬಂದಿದೆ. ಆತನ ಸ್ಥಿತಿಯು ಕೂಟ ಗಂಭೀರವಾಗಿದೆ ಎನ್ನಲಾಗಿದೆ. ಇವರಿಬ್ಬರೂ ಮುಳಬಾಗಿಲು ತಾಲೂಕಿನವರು ಎಂದು ತಿಳಿದು ಬಂದಿದೆ.

student death, Bengaluru, college,

Articles You Might Like

Share This Article