ನವದೆಹಲಿ, ಆ. 30 – ಸರ್ಕಾರಿ ಶಾಲೆಯ ತರಗತಿ ವೇಳೆ ವಿದ್ಯಾರ್ಥಿನಿಯೊಬ್ಬಳ ತಲೆಯ ಮೇಲೆ ಸೀಲಿಂಗ್ ಫ್ಯಾನ್ ಬಿದ್ದು ಗಾಯಗೊಂಡ ಘಟನೆ ದೆಹಲಿಯ ನಂಗ್ಲೋಯನಲ್ಲಿ ನಡೆದಿದೆ.
ಕಳÉದ ಆಗಸ್ಟ್ 27 ರಂದು ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.ಛಾವಣಿ ಒದ್ದೆಯಾಗಿತ್ತು ಮತ್ತು ಅದರಿಂದ ನೀರು ಜಿನುಗುತ್ತಿದೆ ಇದರಿಂದ ಸೀಲಿಂಗ್ ಮುರಿದು ಫ್ಯಾನ್ ಕೆಳಗೆ ಬಿದ್ದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ವಿದ್ಯಾರ್ಥಿಯನ್ನು ನಂಗ್ಲೋಯಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಬಗ್ಗೆ ಬಿಜೆಪಿ ಸರ್ಕಾದ ಬೇಜವಾಬ್ದಾರಿ ನಡೆ ಇದ್ದಾಗಿದೆ ಎಂದು ಟೀಕಿಸಿದ್ದಾರೆ,ಆದರೆ ಶಾಲೆಯ ಅಕಾರಿಗಳು ಅಥವಾ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ