ರಿವಾಲ್ವರ್‌ನಿಂದ ಬೆದರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Spread the love

ಬೆಂಗಳೂರು,ಮೇ23- ತನ್ನ ಮನೆಯಲ್ಲಿ ಬಾಡಿಗೆಗಿದ್ದ ವಿದ್ಯಾರ್ಥಿನಿಗೆ ರಿವಾಲ್ವರ್‌ನಿಂದ ಬೆದರಿಸಿ ಮನೆ ಮಾಲೀಕನೇ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅಶೋಕನಗರ ಠಾಣೆ ಪೊಲೀಸರು ಬಿಹಾರ ಮೂಲದ ಮನೆ ಮಾಲೀಕನನ್ನು ಬಂಧಿಸಿದ್ದಾರೆ.

ನಗರದಲ್ಲಿ ಟೈಲ್ಸ್ ವ್ಯಾಪಾರ ಮಾಡಿಕೊಂಡಿದ್ದ ಆರೋಪಿಯ ಮನೆಯಲ್ಲಿ ಕಳೆದ ಮಾರ್ಚ್‍ನಿಂದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಾಡಿಗೆಗಿದ್ದಾರೆ. ವಿದ್ಯಾರ್ಥಿನಿ ಮನೆಗೆ ಸ್ನೇಹಿತರು ಬರುತ್ತಿದ್ದ ಬಗ್ಗೆ ಮಾಲೀಕ ತಗಾದೆ ತೆಗೆದು ಜಗಳವಾಡುತ್ತಿದ್ದನು. ಏ.11ರಂದು ಮತನಾಡುವ ನೆಪದಲ್ಲಿ ಆಕೆ ಮನೆಗೆ ಹೋಗಿ ರಿವಾಲ್ವರ್‍ನಿಂದ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.

ಈ ಬಗ್ಗೆ ಆಕೆ ತನ್ನ ಪೊಷಕರಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ಪೊಷಕರು ನೀಡಿದ ದೂರನ್ನು ದಾಖಲಿಸಿಕೊಂಡು ಆರೋಪಿ ಮನೆ ಮಾಲೀಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments