ಉಕ್ರೇನ್‍ನಲ್ಲಿ ಬಂಕರ್‌ಗಳಲ್ಲಿ ಆಶ್ರಯ ಪಡೆದಿರುವ ಕರ್ನಾಟಕದ ವಿದ್ಯಾರ್ಥಿಗಳು

Social Share

ಬೆಂಗಳೂರು,ಫೆ.25- ಯುದ್ದಪೀಡಿತ ಉಕ್ರೇನ್‍ನಲ್ಲಿ ಕರ್ನಾಟಕದಿಂದ ವ್ಯಾಸಂಗಕ್ಕೆ ತೆರಳಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ನೆರವಿಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ಶುಕ್ರವಾರ ಬೆಳಗೆ 6 ಗಂಟೆಗೆ ಕೆಎಸ್‍ಡಿಎಂಎ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಂಗಳೂರಿನ 28, ಮೈಸೂರಿನ 10, ಬಳ್ಳಾರಿ ಮತ್ತು ಹಾಸನದ 5, ಬಾಗಲಕೋಟೆ ಚಾಮರಾಜನಗರ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಕೊಡುಗು, ರಾಯಚೂರು ಜಿಲ್ಲೆಗಳ ತಲಾ 3, ಚಿತ್ರದುರ್ಗ ದಾವಣಗೆರೆ, ಧಾರವಾಡ, ಕಲಬುರಗಿ, ಮಂಡ್ಯ, ಉಡುಪಿ, ವಿಜಾಪುರ ಜಿಲ್ಲೆಗಳ ತಲಾ ಇಬ್ಬರು, ಕೋಲಾರ, ಶಿವಮೊಗ್ಗ, ಉತ್ತರಕನ್ನಡದ ತಲಾ ಒಬ್ಬೊಬ್ಬರು ತಾಯ್ನಡಿಗೆ ಮರಳಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕೆಲವರು ಸುದ್ದಿ ವಾಹಿನಿಗಳಲ್ಲಿ ಮಾತನಾಡಿದ್ದು, ತಮ್ಮ ಜೀವಕ್ಕೆ ಅಪಾಯ ಇದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. ನಾವು ರೈಲು ನಿಲ್ದಾಣದಲ್ಲಿ ಸಿಲುಕಿದ್ದೇವೆ. ಇಲ್ಲಿಂದ ಹೋಗಲು ಟ್ಯಾಕ್ಸಿ, ವಾಹನ ಏನೂ ಸಿಗುತ್ತಿಲ್ಲ. ಇಲ್ಲಿಂದ ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾರತೀಯ ರಾಯಭಾರ ಕಚೇರಿಗೂ ಫೋನ್ ಮಾಡುತ್ತಿದ್ದೇವೆ. ನಮ್ಮ ಫೋಷಕರಿಗೂ ಫೋನ್ ಮಾಡಿ ಹೇಳುತ್ತಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಬೀದರ್‍ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಿÀಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಫೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್‍ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಇರಲು ಭಾರತ ಸರ್ಕಾರ ಹೇಳಿದೆ ಎಂದು ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ತಮಗೆ ಸರಿಯಾಗಿ ನೀರು, ಆಹಾರ ಸಹ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಇವರಲ್ಲಿ ರಾಣೇಬೆನ್ನೂರು ತಾಲೂಕಿನ 7 ವಿದ್ಯಾರ್ಥಿಗಳು ಮತ್ತು ಬ್ಯಾಡಗಿ ತಾಲೂಕಿನ ಒಬ್ಬ ವಿದ್ಯಾರ್ಥಿ ಇದ್ದಾರೆ.
ಸುಮನ್ ವೈಶಾಯರ್, ರಂಜಿತ ಕಲಕಟ್ಟಿ, ಅಮೀತ್ ವೈಶಾಯರ್, ನವೀನ ಗ್ಯಾನಗೌಡರ, ಜೈನ್ ನತುಲ್, ವಸಂತಕುಮಾರ, ಶಿವಲಿಂಗಪ್ಪ ಮತ್ತು ಪ್ರವೀಣ ಅಜರೆಡ್ಡಿ ಎಂಬ ಎಂಟು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಯುವಕ ಸೇರಿದಂತೆ ಅನೇಕ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ಪಾಲಕರು ಆತಂಕಗೊಂಡಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಎಂಬ ವಿದ್ಯಾರ್ಥಿ ಉಕ್ರೇನ್ ದೇಶದ ಕೀವ್ ರಾಜಧಾನಿಯ ಚೆರ್ನಿವೀಸ್ ನಗರದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಮಗ ಸುರಕ್ಷಿತವಾಗಿದ್ದಾನೆ ಎಂದು ಪಾಲಕರು ಹೇಳುತ್ತಿದ್ದಾರೆ.
ಮಹಾಗಣಪತಿ ಬಿಳಿಮಗ್ಗದ ಚೆರ್ನಿವೀಸ್ ನಗರದ ಬೋಕೋವಿನಿಯನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ರಷ್ಯಾ ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿರುವುದರಿಂದ ವಿಮಾನಯಾನ ರದ್ದಾಗಿದ್ದು, ಉಕ್ರೇನ್‍ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ರಾಮನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಮಾಡಲು ಹೋಗಿದ್ದು, ಯುದ್ಧಭೀತಿ ಎದುರಿಸುವಂತಾಗಿದೆ. ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಹಾಗೂ ರಾಮನಗರದ ಐಜೂರು ಮೂಲದ ಆಯೆಷಾ ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿ ಕ್ಲಾಟನ್ ಅವರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಮನೆಯವರೊಂದಿಗೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ.
ದೇರೆಬೈಲ್ ನಿವಾಸಿ ಅನೈನಾ ಅನ್ನಾ ಎಂಬ ವಿದ್ಯಾರ್ಥಿನಿ ಮತ್ತು ಪಡೀಲ್ ನಿವಾಸಿ ಕ್ಲಾಟನ್ ಎಂಬ ವಿದ್ಯಾರ್ಥಿ ಉಕ್ರೇನ್ ನಲ್ಲಿ ಇರುವ ಮಂಗಳೂರು ಮೂಲದ ವಿದ್ಯಾರ್ಥಿಗಳು.
ಅನೈನಾ ಅನ್ನಾ ಅವರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಉಕ್ರೇನ್ ನ ಗಡಿ ಭಾಗವಾದ ಖಾರ್ಕಿವ್ ನಗರದಲ್ಲಿ ನೆಲೆಸಿದ್ದಾರೆ.ಇವರು ಮಂಗಳೂರಿನಲ್ಲಿರುವ ತಾಯಿ ಸುಜತ ಜೊತೆಗೆ ಮಾತನಾಡಿದ್ದು, ಸದ್ಯ ಸುರಕ್ಷಿತ ಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ಕ್ಲಾಟನ್ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮನೆಯವರನ್ನು ಸಂಪರ್ಕಿಸಿ ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿಯೂ ವಿದೇಶಾಂಗ ಇಲಾಖೆ ಕಂಟ್ರೋಲ್ ರೂಂ ತೆಗೆದಿದೆ. ಕರ್ನಾಟಕದ ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿರುವ ಮಾಹಿತಿ ಇದೆ. ಭಾರತದ ಎಂಬೆಸಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ನಾವು ಹೇಳುವವರೆಗೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ.

Articles You Might Like

Share This Article