SHOCKING: ಹೆಡ್ ಫೋನ್ ಬಳಕೆಯಿಂದ 100 ಕೋಟಿ ಜನರಿಗೆ ಅಪಾಯ..!

Social Share

ನವದೆಹಲಿ,ನ.16-ಅತಿಯಾದ ಹೆಡ್ಫೆಪೋನ್ ಬಳಕೆಯಿಂದಾಗಿ ವಿಶ್ವಾದ್ಯಂತ ನೂರು ಕೋಟಿ ಯುವ ಸಮುದಾಯ ಕಿವುಡತನಕ್ಕೆ ಬಲಿಯಾಗುತ್ತಿದೆ ಎಂಬ ಆಘಾತಕಾರಿ ವರದಿ ಪ್ರಕಟಗೊಂಡಿದೆ. ಬಿಎಂಜೆ ಗ್ಲೋಬಲ್ ಹೆಲ್ತ್ ಜನರಲ್ ಪ್ರಕಟಿಸಿರುವ ಸಮೀಕ್ಷಾ ವರದಿಯ ಪ್ರಕಾರ, ಹೆಡ್ ಪೋನ್, ಇಯರ್ ಬಡ್ಸ್ಗಳನ್ನು ಬಳಸಿ ಜೋರಾದ ಸಂಗೀತ ಹಾಗೂ ಶಬ್ದ ಗ್ರಹಿಕೆಯಿಂದಾಗಿ ಕಿವುಡತನ ಆವರಿಸುತ್ತಿದೆ ಎಂದು ತಿಳಿಸಿದೆ.

ಅಮೆರಿಕದ ಸೌತ್ ಕರೊಲಿನಾ ವೈದ್ಯಕೀಯ ವಿವಿ ಸೇರಿದಂತೆ ಅಂತಾರಾಷ್ಟ್ರೀಯ ತಂಡಗಳ ಸಮೀಕ್ಷೆ ನಡೆಸಿವೆ. ಭವಿಷ್ಯದ ಅಪಾಯವನ್ನು ಗುರುತಿಸಿರುವ ಈ ವರದಿ ಸರ್ಕಾರಗಳು ಕೂಡಲೇ ಸುರಕ್ಷಿತ ಕಾನೂನುಗಳನ್ನು ರೂಪಿಸಬೇಕು, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಸುರಕ್ಷಿತ ಕೇಳುವಿ ಕೆಯ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಲಾಗಿದೆ.

ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ : ಮೋದಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಸ್ತುತ 430 ಮಿಲಿಯನ್ ಜನ ಕಿವುಡತನದಿಂದ ಬಳಲುತ್ತಿದ್ದಾರೆ. ಹೆಡ್ ಫೋನ್, ಇಯರ್ ಬಡ್ಸ್ಗಳನ್ನು ಬಳಸುವವರು ಈ ಗುಂಪಿಗೆ ಸೇರಿದ್ದಾರೆ.

ಸ್ಮಾರ್ಟ್ಫೆಫೋನ್, ಇಯರ್ ಬಡ್ಸ್ಗಳಲ್ಲಿ ಶಬ್ದದ ಮಿತಿ 104ರಿಂದ 112 ಡೆಸಿಬಲ್ ಇದ್ದು, ಇದು ಸರಾಸರಿ ಶಬ್ದದ ಪ್ರಮಾಣ 105ನ್ನು ಮೀರಿದೆ.

2024ರ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಟ್ರಂಪ್ ಸ್ಪರ್ಧೆ

ವೈದ್ಯಕೀಯ ಮಾನದಂಡಗಳ ಪ್ರಕಾರ ವಯಸ್ಕರ ಕಿವಿಗಳಿಗೆ 80 ಡೆಸಿಬಲ್, ಮಕ್ಕಳ ಕಿವಿಗೆ 75 ಡಿಸಿಬಲ್ ಪ್ರಮಾಣವನ್ನು ಅಲ್ಪಕಾಲ ತಡೆದುಕೊಳ್ಳುವ ಶಕ್ತಿ ಇದೆ. ಆದರೆ ಅದನ್ನು ಮೀರಿ ಶಬ್ದ ಗ್ರಹಿಸಿದರೆ ಕಿವಿಗಳಿಗೆ ಅಪಾಯವಾಗುತ್ತದೆ.

Articles You Might Like

Share This Article