ಧರ್ಮ ದಂಗಲ್: ಪೊಲೀಸ್ ಭದ್ರತೆಯಲ್ಲಿ ಸುಬ್ರಮಣ್ಯಸ್ವಾಮಿ ರಥೋತ್ಸವ

Social Share

ಬೆಂಗಳೂರು,ನ.29- ಧರ್ಮ ದಂಗಲ್ ಕಾರಣದಿಂದಾಗಿ ಇಂದು ನಡೆಯುತ್ತಿರುವ ವಿವಿ ಪುರಂ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹಿಂದೂಗಳ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ರಥೋತ್ಸವ ನೆರವೇರಿಸಲಾಯಿತು.

ಇಂದಿನ ರಥೋತ್ಸವದ ಹಿನ್ನಲೆಯಲ್ಲಿ ಅನ್ಯ ಧರ್ಮಿಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದ ಹಿಂದೂ ಪರ ಹೋರಾಟಗಾರರನ್ನು ತಡರಾತ್ರಿ ಪೊಲೀಸರು ಬಂಧಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ರಾಹುಲ್ ಹೇಳಿಕೆಗೆ ತಬ್ಬಿಬ್ಬಾದ ಪತ್ರಕರ್ತರು

ಹಿಂದೂ ಪರ ಸಂಘಟನೆಗಳ ಸದಸ್ಯರನ್ನು ಬಂಧಿಸಿರುವ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನಮ್ಮ ಹೋರಾಟಕ್ಕೆ ಬೆದರಿರುವ ಶಾಸಕ ಉದಯ ಗರುಡಾಚಾರ್ ಅವರು ತಮ್ಮ ಪ್ರಭಾವ ಬಳಸಿ ನಮ್ಮನ್ನು ಬಂಧಿಸಿದ್ದಾರೆ ಅದರ ಪ್ರತಿಫಲವನ್ನು ಅವರು ಅದಷ್ಟು ಬೇಗ ಅನುಭವಿಸುತ್ತಾರೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಸಚಿವರು ಬೆಳಗಾವಿ ಪ್ರವೇಶಿಸಿದರೆ ತಕ್ಕ ಪಾಠ: ಕರವೇ ಎಚ್ಚರಿಕೆ

ಧರ್ಮದಂಗಲ್ ಕರಿ ನೆರಳ ನಡುವೆಯೂ ಇತಿಹಾಸ ಪ್ರಸಿದ್ದ ಸುಬ್ರಮಣ್ಯ ರಥೋತ್ಸವ ಪೊಲೀಸ್ ಬಂದೋಬಸ್ತ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಸಜ್ಜನ್ ರಾವ್ ಸರ್ಕಲ್ ನಲ್ಲಿರುವ ಸುಬ್ರಹ್ಮಣ್ಯ ದೇವಾಲಯದಿಂದ ರಥೋತ್ಸವ ಹಾದು ಹೋಗುವ ಹಾದಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ರಥೋತ್ಸವ ಹಾದು ಹೋಗುವ ರಸ್ತೆಗಳ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ನಿಷೇಧಿಸಲಾಗಿತ್ತು.

ಗಡಿ ವಿವಾದ ಸಮರ್ಥ ವಾದಕ್ಕೆ ಸಿದ್ಧ: CM ಬೊಮ್ಮಾಯಿ

ಸಜ್ಜನ್ ರಾವ್ ವೃತ್ತದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಾಲಯಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.

ಪೊಲೀಸ್ ಸರ್ಪಗಾವಲು:
ಧರ್ಮ ದಂಗಲ್ ವಿಚಾರದ ಹಿನ್ನಲೆಯಲ್ಲಿ ದೇವಾಲಯದ ಸುತ್ತಮತ್ತು 600 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿತ್ತು. 49 ಪಿಎಸ್‍ಐ, 14 ಇನ್ಸ್‍ಪೆಕ್ಟರ್, 16 ಎಸಿಪಿ, 158 ಎಎಸ್‍ಐಗಳು, 148 ಕಾನ್ಸ್‍ಟೆಬಲ್‍ಗಳು, 236 ಪಿಸಿಗಳು ಹಾಗೂ 22 ಹೋಂ ಗಾರ್ಡ್‍ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

Dharma Dangal, Subramanya Swamy, Fair, Bengaluru, Police, Security,

Articles You Might Like

Share This Article