ಜಿನೀವಾ,ಜ.12- ಭಾರತದ ಮೂಲದ ಬಯೋಟೆಕ್ ಸಂಸ್ಥೆ ತಯಾರಿಸಿರುವ ಎರಡು ಕೆಮ್ಮಿನ ಸಿರಪ್ಗಳನ್ನು ಮಕ್ಕಳ ಮೇಲೆ ಬಳಕೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೆಮ್ಮಿನ ಸಿರಪ್ಗಳು ಗುಣಮಟ್ಟದ ಮಾನದಂಡಗಳನ್ನು ಹಾಗೂ ವಿಶೇಷಣಗಳನ್ನು ಪೂರೈಸಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಂಬ್ರೋನಾಲ್ ಹಾಗೂ ಡಾಕ್-1 ಕಾಫ್ ಸಿರಫ್ಗಳನ್ನು ಸೇವಿಸಿದ ಮಕ್ಕಳು ಸಾವನ್ನಪ್ಪಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿರುವುದರಿಂದ ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
163 ಕೋಟಿ ಜಾಹೀರಾತು ಖರ್ಚು ಪಾವತಿಸಲು ಆಪ್ ಸರ್ಕಾರಕ್ಕೆ ನೋಟೀಸ್
ಉಜ್ಬೇಕಿಸ್ತಾನ್ ಗಣರಾಜ್ಯದ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯಗಳು ಕೈಗೊಂಡ ಕೆಮ್ಮಿನ ಸಿರಪ್ಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯು ಎರಡೂ ಉತ್ಪನ್ನಗಳಲ್ಲಿ ಸ್ವೀಕಾರಾರ್ಹವಲ್ಲದ ಅಂಶಗಳಿರುವುದು ದೃಢಪಟ್ಟಿತ್ತು.
ಡಿಸೆಂಬರ್ 22 ರಂದು ಉಜ್ಬೇಕಿಸ್ತಾನ, ಮೇರಿಯನ್ ಬಯೋಟೆಕ್ ಕಂಪನಿಯು ತಯಾರಿಸಿದ ಔಷಧಿಗಳನ್ನು ಸೇವಿಸಿ 18 ಮಕ್ಕಳು ಸಾವನ್ನಪ್ಪಿದ್ದರು ಎನ್ನಲಾಗಿದೆ ಈ ಘಟನೆಯ ನಂತರ ಮರಿಯನ್ ಸಂಸ್ಥೆಯ ಪರವಾನಗಿ ರದ್ದುಗೊಳಿಸಲಾಗಿದೆ.
Substandard, WHO, links, India, made, cough, syrups,