ಕೈರೋ,ಜ.3- ಸೂಡಾನ್ ಪ್ರಧಾನ ಮಂತ್ರಿ ಅಬ್ದುಲ್ಲಾ ಹಮ್ಡೋಕ್ ಅವರು ರಾಜಕೀಯ ಅಸ್ತವ್ಯಸ್ತತೆ ಮತ್ತು ವ್ಯಾಪಕವಾದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ನಡುವೆ ಕಳೆದ ರಾತ್ರಿ ರಾಜೀನಾಮೆ ಘೋಷಿಸಿದ್ದಾರೆ. ಅಕ್ಟೋಬರ್‍ನಲ್ಲಿ ಮಿಲಿಟರಿ ಧಂಗೆಯ ನಂತರ ಒಪ್ಪಂದದ ಭಾಗವಾಗಿ ಹಮ್ಡೋಕ್ ನವೆಂಬರ್‍ನಲ್ಲಿ ಪ್ರಧಾನ ಮಂತ್ರಿಯಾಗಿದ್ದರು.
ಈಗ ಅವರ ರಾಜೀನಾಮೆಯು ದೇಶದ ಭದ್ರತೆ ಮತ್ತು ಆರ್ಥಿಕ ಸವಾಲಿನ ಜೊತೆಗೆ ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿದೆ. ಪ್ರಜಾಪ್ರಭುತ್ವಕ್ಕೆ ಸೂಡಾನ್ ಪರಿವರ್ತನೆಯನ್ನು ಪೂರ್ಣಗೊಳಿಸಲು ಮಾರ್ಗ ನಕ್ಷೆ ನಮ್ಮ ಮುಂದಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ರಾಷ್ಟ್ರವನ್ನು ಮುನ್ನಡೆಸಲು ಮತ್ತು ನಾಗರಿಕ, ಪ್ರಜಾಪ್ರಭುತ್ವ ದೇಶಕ್ಕೆ ಪರಿವರ್ತನೆಯನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತಿದ್ದೇನೆ ಎಂದು ಹೇಳಿದರು. ಆದರೆ ಉತ್ತರಾಧಿಕಾರಿಯನ್ನು ಹೆಸರಿಸಲಿಲ್ಲ.
ಮಿಲಿಟರಿ ಸ್ವಾೀಧಿನದ ನಂತರ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಪೂರ್ಣ ಪ್ರಮಾಣದ ಬಿಕ್ಕಟ್ಟಾಗಿ ಪರಿಣಮಿಸಬಹುದು ಮತ್ತು ಈಗಾಗಲೇ ಜರ್ಜರಿತವಾಗಿರುವ ದೇಶದ ಆರ್ಥಿಕತೆಯನ್ನು ಹಾನಿಗೊಳಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ನಮ್ಮ ದೇಶವು ದುರಂತಕ್ಕೆ ಜಾರುವುದನ್ನು ತಡೆಯಲು ನಾನು ಸಾಧ್ಯವಾದಷ್ಟು ಪ್ರಯತ್ನಿಸಿದೆ.
ಈಗ, ನಮ್ಮ ರಾಷ್ಟ್ರವು ಅಪಾಯಕಾರಿ ತಿರುವುಗಳನ್ನು ಎದುರಿಸುತ್ತಿದೆ. ಅದನ್ನು ತುರ್ತಾಗಿ ಸರಿಪಡಿಸದಿದ್ದರೆ ಉಳಿವಿಗೆ ಸಂಚಕಾರ ಬರಬಹುದು ಎಂದು ಅವರು ಹೇಳಿದರು.
ನಿನ್ನೆಯು ಕೂಡ ಪ್ರತಿಭಟನೆ ನಡೆದಿದೆ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆಯನ್ನು ಕನಿಷ್ಠ 57ಕ್ಕೆ ಏರಿದೆ ನೂರಾರು ಮಂದಿ ಗಾಯಗೊಂಡಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ, ಮಹಿಳಾ ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳಿಂದ ಲೈಂಗಿಕ ದೌರ್ಜನ್ಯದ ಆರೋಪಗಳು ಕಾಣಿಸಿಕೊಂಡವು.
