ಟಿ-10 ಕ್ರಿಕೆಟ್ ಲೀಗ್ ನಲ್ಲಿ ಗೇಲ್ v/s ಸುದೀಪ್

Social Share

ಬೆಂಗಳೂರು, ಅ. 14- ಇತ್ತೀಚೆಗೆ ಕ್ರಿಕೆಟ್ ವಿಶ್ವದೆಲ್ಲೆಡೆ ತನ್ನ ಪ್ರಭಾವ ಬೀರುತ್ತಿದೆ, ಕ್ರಿಕೆಟ್ ಶಿಶುಗಳೆಂದು ಗುರುತಿಸಿಕೊಳ್ಳುವ ಸಣ್ಣ ಪುಟ್ಟ ದೇಶಗಳ ತಂಡಗಳು ಕೂಡ ಕ್ರಿಕೆಟ್ನತ್ತ ಒಲವು ತೋರಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ನಲ್ಲೂ ಸ್ಕಾಟ್ಲ್ಯಾಂಡ್ನಂತಹ ದೇಶವು ಪಾಲ್ಗೊಳ್ಳುತ್ತಿದೆ.

ಈಗ ಕ್ರಿಕೆಟ್ ರಂಗದಲ್ಲಿ ಮತ್ತೊಂದು ಸಿಹಿ ಸುದ್ದಿ ಕೊಡಲು ಯೂನಿರ್ವಸಲ್ ಬಾಸ್ ಖ್ಯಾತಿಯ ಕ್ರಿಸ್ಗೇಲ್ ಹಾಗೂ ಕಿಚ್ಚ ಸುದೀಪ್ ಅವರು ಹೊರಟಿದ್ದಾರೆ. ಕಿಚ್ಚ ಸುದೀಪ್ ಹಾಗೂ ಕ್ರಿಸ್ಗೇಲ್ರ ಸಾರಥ್ಯದಲ್ಲಿ ನೂತನ ಟಿ 10 ಸರಣಿಯು ಆರಂಭಗೊಳ್ಳಲಿದ್ದು ಡಿಸೆಂಬರ್ನಲ್ಲಿ ಈ ಲೀಗ್ನ ಮೊದಲ ಆವೃತ್ತಿಯು ಆರಂಭಗೊಳ್ಳಲಿದೆ.

ಈ ಲೀಗ್ನ ಕ್ರಿಕೆಟ್ ರಂಗದ ಮಾಜಿ ಕಲಿಗಳೊಂದಿಗೆ ಚಿತ್ರರಂಗದ ಸ್ಟಾರ್ ನಟರು ಸೆಣಸಾಟ ನಡೆಸಲಿರುವುದರಿಂದ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆಯಲಿದೆ ಎಂದು ಸೂಪರ್ 10 ಲೀಗ್ನ ಆಯೋಜಕ ಹಾಗೂ ಸಿಇಒ ದಿನೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗೇಲ್ ಸಂತಸ:
ನಾನು ಕ್ರಿಕೆಟ್ ರಂಗದ ಎಲ್ಲಾ ಮಾದರಿಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೇನೆ, ಈಗ ಭಾರತ ಚಿತ್ರರಂಗದ ಸೂಪರ್ ಸ್ಟಾರ್ಗಳು ಹಾಗೂ ಮಾಜಿ ಕ್ರಿಕೆಟಿಗರ ಜೊತೆಗೆ ಮೈದಾನಕ್ಕಿಳಿದು ಬ್ಯಾಟ್ ಬೀಸಲು ತುಂಬಾ ಸಂತಸವಾಗುತ್ತಿದೆ. ಸರಣಿಯು ಟಿ 10 ಮಾದರಿಯಲ್ಲಿ ನಡೆಯಲಿದ್ದು ಇದರಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ ಎಂದು ಕೆರೆಬಿಯನ್ನ ಸೋಟಕ ಆಟಗಾರ ಕ್ರಿಸ್ ಗೇಲ್ ಅವರು ಹೇಳಿದ್ದಾರೆ.

ಉತ್ತಮ ವೇದಿಕೆ:
ಭಾರತದಲ್ಲಿ ಕ್ರಿಕೆಟ್ಗೆ ಹೆಚ್ಚು ಸ್ಥಾನಮಾನವಿದೆ, ನಾನು ಕೂಡ ಈ ಹಿಂದೆ ಭಾರತೀಯ ಚಿತ್ರರಂಗದವರ ಜೊತೆಗೆ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಅನುಭವವಿದೆ. ಈಗ ಮತ್ತೊಮ್ಮೆ ನನ್ನ ಮೆಚ್ಚಿನ ಸಿನಿ ತಾರೆಯರು, ಕ್ರಿಕೆಟ್ ದಿಗ್ಗಜರು, ಕಾರ್ಪೊರೇಟ್ ಸೆಕ್ಟರ್ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ, ವೈಯಕ್ತಿಕವಾಗಿ ನನಗೆ ಕ್ರಿಕೆಟ್ ಅಂದರೆ ಬಲು ಇಷ್ಟ. ಸಿನಿಮಾ ತಾರೆಯರಲ್ಲಿ ಅಡಗಿರುವ ಕ್ರಿಕೆಟ್ ಕೌಶಲ್ಯತೆಯನ್ನು ಹೊರತರಲು ಇದೊಂದು ಉತ್ತಮ ವೇದಿಕೆ ಆಗಿದೆ ಎಂದು ಸುದೀಪ್ ಹೇಳಿದರು.

ವಿಶ್ವಮಟ್ಟದಲ್ಲಿ ಕ್ರಿಕೆಟ್ ಅನ್ನು ಮತ್ತಷ್ಟು ಖ್ಯಾತಗೊಳಿಸುವ ಸಲುವಾಗಿ ನಾವು ಒಂದು ವರ್ಷದಿಂದಲೂ ಸಿನಿಮಾ ತಾರೆಯರು ಹಾಗೂ ಕ್ರಿಕೆಟ್ ದಿಗ್ಗಜರೊಂದಿಗೆ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಒಂದು ವರ್ಷದಿಂದಲೂ ಚಿಂತಿಸುತ್ತಿದ್ದು ಡಿಸೆಂಬರ್ನಲ್ಲಿ ಇದರ ಮೊದಲ ಆವೃತ್ತಿ ಆರಂಭಗೊಳ್ಳಲಿದ್ದು ಕ್ರಿಕೆಟ್ ಹಾಗೂ ಸಿನಿಮಾರಂಗದ ಖ್ಯಾತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೂಪರ್ 10 ಲೀಗ್ನ ಆಯೋಜಕ ಹಾಗೂ ಸಿಇಒ ದಿನೇಶ್ ಕುಮಾರ್ ಹೇಳಿದ್ದಾರೆ.

Articles You Might Like

Share This Article