ಸರ್ಕಾರಿ ಕಚೇರಿ ದುರ್ಬಳಕೆ : ಜೀವರಾಜ್ ವಿರುದ್ಧ ಕ್ರಮಕ್ಕೆ ಮುರೊಳ್ಳಿ ಆಗ್ರಹ

Social Share

ಚಿಕ್ಕಮಗಳೂರು, ನ.25- ತಮ್ಮ ಆಪ್ತರಿಗೆ ಹಾಗೂ ಪಕ್ಷದ ಮುಖಂಡರಿಗೆ ಸರ್ಕಾರಿ ಸಂಬಳ ಕೊಡಿಸುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುೀಧಿರ್ ಕುಮಾರ್ ಮುರೊಳ್ಳಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಪಿ.ವಿಜಯಾನಂದ ಅವರನ್ನು ಕಳೆದ 2021ರಲ್ಲಿ ತಮ್ಮ ಕಾರು ಚಾಲಕ ಎಂದು ನೇಮಕ ಮಾಡಿಕೊಂಡ ಜೀವರಾಜ್ ಅವರು ಅವರಿಗೆ ಮಾಸಿಕ ಸಂಬಳ ನಿಗದಿ ಮಾಡಿದ್ದರು.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಶಾಸಕ ರಾಜುಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಸಲುವಾಗಿಯೇ ಕೆಲಸದಿಂದ ಮುಕ್ತಿಗೊಳಿಸಿದ್ದರು ಎಂದು ಆರೋಪಿಸಿದ್ದರು.

ರಾಜೇಗೌಡರ ವಿರುದ್ಧ ನಿರಾಧಾರ ಆರೋಪಗಳನ್ನು ತಮ್ಮ ಆಪ್ತರ ಮೂಲಕ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಮುಖಂಡರಾದ ಎಂ.ಜೆ.ಪುಣ್ಯಪಾಲ್, ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಎಂ.ಸಿ.ಶೃತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ, ಬಿಜೆಪಿ ನಾಯಕಿ ವಾಣಿ ಸತೀಶ್ ಹೆಗಡೆ ಅವರನ್ನು ಕೂಡ ತಮ್ಮ ಕಚೇರಿಗೆ ನೇಮಿಸಿಕೊಂಡು ಸಂಬಳ ನಿಗದಿ ಮಾಡಿ ಸರ್ಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

ಬಿಜೆಪಿಯ ಬಾಡಿಗೆ ಭಾಷಣಕಾರರಿಗೆ ಸರ್ಕಾರದ ಸಂಬಳ ಕೊಡಿಸುತ್ತಿರುವುದು ದಾಖಲೆಯಿಂದ ಸಾಬೀತಾಗಿದೆ. ವಿಜಯಾನಂದ್, ಪುಣ್ಯಪಾಲ್, ಶೃತಿ ಅವರಿಗೆ 31,500ರೂ., ವಾಣಿ ಸತೀಶ ಅವರಿಗೆ 17,000ರೂ. ವೇತನ ಬರುವಂತೆ ವ್ಯವಸ್ಥೆ ಮಾಡಿದ್ದಾರೆ.

ಮತ್ತೆ ಸದ್ದು ಮಾಡಿದ ಪೊಲೀಸರ ರಿವಾಲ್ವರ್ : ರೌಡಿಗೆ ಗುಂಡೇಟು

ತಮ್ಮ ಪಕ್ಷದಲ್ಲೇ ಸಾಕಷ್ಟು ನಿರುದ್ಯೋಗಿ ಕಾರ್ಯಕರ್ತರಿರು ವಾಗ ಅವರ್ಯಾರಿಗೂ ಉದ್ಯೋಗ ಕಲ್ಪಿಸದೆ ತಮ್ಮನ್ನು ಓಲೈಸುವವರಿಗೆ ಅವಕಾಶ ಕಲ್ಪಿಸಿ ಜನರ ತೆರಿಗೆ ಹಣ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವುದು ಕಾನೂನು ಬಾಹಿರ ಕ್ರಮವಾಗಿದೆ.

ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಒಪ್ಪಿಕೊಂಡು ಒಟ್ಟಾಗಿ ಕೆಲಸ ಮಾಡಿ : ಡಿಕೆಶಿ

ಮುಖ್ಯಮಂತ್ರಿಗಳ ಕೂಡಲೇ ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Sudhir Kumar Murolli, chikkamagaluru, Jeevraj,

Articles You Might Like

Share This Article