ಕೌಟುಂಬಿಕ ಕಲಹ : ಶಿಕ್ಷಕಿ ನೇಣಿಗೆ ಶರಣು

ರಾಯಚೂರು,ಜ.7- ಗಂಡನ ಕಿರುಕುಳಕ್ಕೆ ಬೇಸತ್ತ ಶಿಕ್ಷಕಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮಾನ್ವಿ ಪಟ್ಟಣದ ವಿಠ್ಠಲ ನಗರದಲ್ಲಿ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ತುಮಕೂರು ಮೂಲದ ಶಾಲಿನಿ ಮೋನ ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಶಾಲಿನಿ ಪತಿ ಮೋಹನ್ ಕೂಡ ಶಿಕ್ಷಕನಾಗಿದ್ದು, ಶಾಲಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಇಬ್ಬರಿಗೆ ಜೀವಿತ ಮತ್ತು ಯುಕ್ತ ಎಂಬ ಇಬ್ಬರು ಮಕ್ಕಳಿದ್ದಾರೆ. ಶಾಲಿನಿ ಪತಿ ಮೋಹನ ಆಕೆಯನ್ನು ಹೊಡೆದು ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಾನ್ವಿ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.