ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Spread the love

ಬೆಳಗಾವಿ, ಜ.28- ಒಂದೇ ಕುಟುಂಬದ ನಾಲ್ವರು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಿನ್ನೆ ತಡರಾತ್ರಿ ಬೆಳಗಾವಿಯಲ್ಲಿ ನಡೆದಿದೆ. ರಾಯಬಾಗ್ ತಾಲೂಕಿನ ಭಿರಡಿ ಗ್ರಾಮದ ಕಲ್ಲಪ್ಪ ಬಡಿಗೇರ ಮತ್ತು ಆತನ ಪತ್ನಿ, ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾತಪ್ಪ ಅಣ್ಣಪ್ಪ ಸುತಾರ (60), ಮಹಾದೇವಿ ಸಾತಪ್ಪ ಸುತಾರ (50), ಸಂತೋಷ ಸಾತಪ್ಪ ಸುತಾರ (26), ದತ್ತಾತ್ರೆಯ ಸಾತಪ್ಪ ಸುತಾರ (28) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.ಮೃತ ದೇಹಗಳನ್ನು ರಾಯಬಾಗ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments