ಕರಾಚಿ,ಮಾ.6- ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಒಂಬತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಕ್ವೆಟ್ಟಾ-ಸಿಬಿ ಹೆದ್ದಾರಿಯ ಕಾಂಬ್ರಿ ಸೇತುವೆಯ ಮೇಲೆ ಬಲೂಚಿಸ್ತಾನ್ ಕಾನ್‍ಸ್ಟಾಬ್ಯುಲರಿ ಸಿಬ್ಬಂದಿಯ ಟ್ರಕ್ ಬಳಿ ಸ್ಪೋಟ ಸಂಭವಿಸಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಇದು ಆತ್ಮಹತ್ಯಾ ದಾಳಿ ಎಂದು ಪ್ರಾಥಮಿಕ ವರದಿಗಳು ಸ್ಪಷ್ಟಪಡಿಸಿವೆ ಎಂದು ಕಚ್ಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಮೆಹಮೂದ್ ನೋಟ್ಜೈ ಹೇಳಿದ್ದಾರೆ. ಸೋಟದ ನಿಖರವಾದ ಸ್ವರೂಪವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ.
ಕೋಲ್ಕತ್ತಾದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ
ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಘಟನಾ ಸ್ಥಳಕ್ಕೆ ತಲುಪಿದ್ದು, ಸ್ಪೋಟದ ಬಳಿಕ ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ಬಲೂಚಿಸ್ತಾನ್ ಕಾನ್‍ಸ್ಟಾಬ್ಯುಲರಿ (ಬಿಸಿ) ಸಿಬ್ಬಂದಿ ಸಿಬಿ ಮೇಳದಲ್ಲಿ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಅವರನ್ನು ಗುರಿಯಾಗಿಸಿ ಬೋಲನ್‍ನಲ್ಲಿ ಬಾಂಬ್ ಸ್ಪೋಟಿಸಲಾಗಿದೆ. ಸ್ಪೋಟದ ತೀವ್ರತೆಗೆ ಟ್ರಕ್ ಪಲ್ಟಿಯಾಗಿದೆ. ದಾಳಿಯಲ್ಲಿ ಬಲೂಚಿಸ್ತಾನ್ ಕಾನ್‍ಸ್ಟಾಬ್ಯುಲರಿಯ ಕನಿಷ್ಠ ಒಂಬತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ನೋಟ್‍ಜೈ ಹೇಳಿದ್ದಾರೆ.
ಈವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಮೃತದೇಹಗಳು ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಸಿಬಿ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಹೆಮ್ಮೆ INS ವಿಕ್ರಾಂತ್‍ನಲ್ಲಿ ನೌಕಾಪಡೆ ಕಮಾಂಡರ್‌ಗಳ ಸಭೆ
ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿ ಪ್ರದೇಶಗಳ ದಾಳಿಯ ಬೆನ್ನಲ್ಲೇ ಮತ್ತೊಂದು ಸ್ಪೋಟ ಸಂಭವಿಸಿದೆ.
Suicide, bombing, kills, 9 policemen, southwest, Pakistan,