ಬೆಂಗಳೂರು,ಜ.3- ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಅವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿದರು.
ಪ್ರದೀಪ್ ಅವರ ತಂದೆ, ತಾಯಿ, ಸಹೋದರ ಮತ್ತು ಪತ್ನಿ ನಮೀತಾರನ್ನು ಭೇಟಿ ಮಾಡ ಸಾಂತ್ವಾನ ಹೇಳಿದರು.
ಪ್ರದೀಪ್ ಸಾವಿಗೂ ಮುನ್ನಾ ಬರೆದಿರುವ ಮರಣಪತ್ರವನ್ನು ತಾವು ಓದಿರುವುದಾಗಿ ಪತ್ನಿ ನಮೀತಾ ಹೇಳಿದರು.
ಅದನ್ನು ಓದಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಅದರಲ್ಲಿ ತಾವು ಹೂಡಿಕೆ ಮಾಡಿರುವ ಬಗ್ಗೆ ಪ್ರದೀಪ್ ವಿವರಣೆ ನೀಡಿದ್ದಾರೆ. ಅದನ್ನು ನನ್ನ ಪತ್ನಿ ಮತ್ತು ಮಕ್ಕಳಿಗೆ ವಾಪಾಸ್ ಕೊಡಿಸಿ ಎಂದು ಹೇಳಿದ್ದಾರೆ ಎಂದು ವಿವರಿಸಿದರು.
ಇಂದಿನಿಂದ ಮತ್ತೆ ಆರಂಭವಾದ ಭಾರತ್ ಜೋಡೋ ಯಾತ್ರೆ
ಪತ್ರದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆಯೂ ಕುಟುಂಬದ ಸದಸ್ಯರ ಜೊತೆ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದರು. ಕುಟುಂಬದ ಜೊತೆ ತಾವಿದ್ದೇವೆ ಎಂಬ ಭರವಸೆ ನೀಡಿದರು.
suicide, businessman, Pradeep, Congress leaders, visit,