ಇಸ್ಲಾಮಾಬಾದ್,ಡಿ.11-ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ದೇಶ ಭ್ರಷ್ಟರಾಗಿದ್ದ ಸುಲೇಮಾನ್ ಶಹಬಾಜ್ ಇಂದು ಮನೆಗೆ ಮರಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರ ಪುತ್ರರಾಗಿರುವ ಸುಲೇಮಾನ್ ವಿರುದ್ದ 2008ರಿಂದ 2018ರ ಅವಧಿಯಲ್ಲಿ ಸುಮಾರು 16.3 ಶತಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ದಾಖಲಾಗಿತ್ತು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಮನಿ ಲ್ಯಾಂಡ್ರಿಂಗ್ ವಿರೋಧಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ(ಎನ್‍ಎಬಿ) ಪ್ರಕರಣ ದಾಖಲಿಸಿತ್ತು. ತನಿಖೆ ನಡೆದು 28 ಬೇನಾಮಿ ಖಾತೆಗಳಲ್ಲಿ 17 ಸಾವಿರ ಹಣ ವಹಿವಾಟು ದಾಖಲಾಗಿರುವುದು ಪತ್ತೆಯಾಗಿತ್ತು.
ಹಿರಿಯ ನಾಯಕರ ಕಡೆಗಣನೆಗೆ ಗುಜರಾತ್ ಸೋಲಿಗೆ ಕಾರಣ : ಮೊಯ್ಲಿ
ಈ ತನಿಖಾ ವರದಿಯಲ್ಲಿ ರಹಸ್ಯವಾಗಿರುವ ಜೊತೆಗೆ ಶಹಬಾಜ್ ಅವರಿಗೆ ವೈಯಕ್ತಿಕ ಸಾಮಥ್ರ್ಯ ಸಾಲ ನೀಡಲಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಅಭಿಯೋಜನೆ ವೇಳೆ ಕೆಲವು ದಿನಗಳ ಕಾಲ ವಿಚಾರಣೆಗೆ ಸುಲೇಮಾನ್ ಹಾಜರಾಗಿದ್ದರು.
2018ರಲ್ಲಿ ಲಂಡನ್‍ಗೆ ಕುಟುಂಬ ಸಮೇತರಾಗಿ ಸ್ವಯಂ ಗಡಿಪಾರಾಗಿದ್ದರು. ಇತ್ತೀಚೆಗೆ ಇಸ್ಲಾಮಾಬಾದ್‍ನ ಹೈಕೋರ್ಟ್ ಸುಲೇಮಾನ್ ಅವರನ್ನು ಬಂಧಿಸಲು ನಿರ್ಬಂಧ ವಿಧಿಸಿತ್ತು. ಜೊತೆಗೆ ವಿಚಾರಣಾೀಧಿನ ನ್ಯಾಯಾಲಯದ ಮುಂದೆ ದೋಷಿತ ವ್ಯಕ್ತಿ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು.
ಅದರ ಪ್ರಕಾರ ಡಿ.13ರಂದು ಸುಲೇಮಾನ್ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಈ ಹಿನ್ನಲೆಯಲ್ಲಿ ಲಂಡನ್‍ನಿಂದ ನಾಲ್ಕು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಸುಲೇಮಾನ್ ಇಂದು ಬೆಳಗ್ಗೆ ತಮ್ಮ ತಂದೆಯನ್ನು ಭೇಟಿ ಮಾಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಸುಲೇಮಾನ್ ವಾಪಸ್ ಬಂದಿರುವುದು ಮತ್ತು ತನ್ನ ತಂದೆಯನ್ನು ಅಪ್ಪಿಕೊಳ್ಳುವ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರಧಾನಮಂತ್ರಿಯವರ ವಿಶೇಷ ಸಹಾಯಕ ಹತಾವುಲ್ಲಾ ತರಾರ್ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಸುಲೇಮಾನ್ ಮರಳಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
2023 ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ
ಸುದ್ದಿಗಾರರೊಂದಿಗೆ ಮಾತನಾಡಿರುವ ಸುಲೇಮಾನ್, ರಾಜಕೀಯ ಬಲಿಪಶುಗಳನ್ನಾಗಿ ಮಾಡಲು ದ್ವೇಷಕ್ಕಾಗಿ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
Suleman Shehbaz, back, Pakistan, four year,