BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್

Social Share

ಮಂಡ್ಯ,ಮಾ.10- ಜಿಲ್ಲೆಯ ಅಭಿವೃದ್ದಿಗಾಗಿ ಪ್ರಧಾನಿ ನರೇಂದ್ರಮೋದಿ ಸರ್ಕಾರಕ್ಕೆ ನಾನು ಬೆಂಬಲ ಕೊಡುತ್ತೇನೆ ಎನ್ನುವ ಮೂಲಕ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಬಿಜೆಪಿ ಸೇರ್ಪಡೆ ಕುರಿತು ಎಲ್ಲಿಯೂ ತುಟಿ ಬಿಚ್ಚಿದ ಅವರು, ನನ್ನ ಬೆಂಬಲ ಬಿಜೆಪಿ ಮತ್ತು ಪ್ರಧಾನಿ ನರೇಂದ್ರಮೋದಿ ಸರ್ಕಾರಕ್ಕೆ. ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಇದು ಅನಿವಾರ್ಯ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಪ್ರಧಾನಿ ನರೇಂದ್ರಮೋದಿ ಅವರಿಂದ ಅಭಿವೃದ್ಧಿಯಾಗುತ್ತದ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ದೃಢವಾದ ನಿರ್ಧಾರಕ್ಕೆ ಬಂದಿದ್ದೇನೆ. ನನ್ನನ್ನು ಆಯ್ಕೆ ಮಾಡಿದ ಮತದಾರರು, ಹಿತೈಷಿಗಳ ಅಭಿಪ್ರಾಯವನ್ನು ಸಂಗ್ರಹಿಸಿದ್ದೇನೆ. ಅದಕ್ಕೆ ಮನ್ನಣೆ ಕೊಡುವುದು ನನ್ನ ಕರ್ತವ್ಯ ಎಂದರು.

ಸಕ್ಕರೆ ನಾಡು ಮಂಡ್ಯ ಜಿಲ್ಲೆ ಜೆಡಿಎಸ್‍ನ ಭದ್ರಕೋಟೆ ಎನ್ನುತ್ತಾರೆ. ಈ ಜಿಲ್ಲೆಯ ಅಭಿವೃದ್ದಿಗೆ ಮಾಡಿರುವುದರ ಬಗ್ಗೆ ಜನತೆ ಪ್ರಶ್ನಿಸುವ ಕಾಲ ಬಂದಿದೆ ಎಂದು ದಳಪತಿಗಳ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದರು.

ಪ್ರತಿ ಹಂತದಲ್ಲೂ ನಾವೇ ಮಾಡಿದ್ದೇವೆ. ನಮ್ಮಿಂದಲೇ ಆಗಿದೆ ಎಂದು ಹೇಳುತ್ತಾರೆ. ಜಿಲ್ಲೆಯ ಜನ ಎಲ್ಲಾ ಚುನಾವಣೆಗಳಲ್ಲೂ ಬೆಂಬಲಿಸಿದ್ದಕ್ಕೆ ನೀವು ಕೊಟ್ಟಿರುವ ಕೊಡುಗೆ ಏನು? ಭದ್ರಕೋಟೆ ಎನಿಸಿದರೆ ಸಾಲದು, ಜಿಲ್ಲೆಯು ಅಭಿವೃದ್ಧಿಯೂ ಆಗಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.

ತಳಮಟ್ಟದಲ್ಲಿ ಪಕ್ಷ ಪ್ರಬಲವಾಗಿದೆ, ಮತ್ತೆ ಅಧಿಕಾರಕ್ಕೇರುತ್ತೇವೆ : ಬೊಮ್ಮಾಯಿ

ಇಡೀ ರಾಜ್ಯದಲ್ಲಿ ದಿಶಾದಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದೆ. ಆದರೆ ಕೆಲವರು ನನ್ನನ್ನು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ನಾನು ಇದಕ್ಕೆ ಉತ್ತರ ಕೊಡುವುದಿಲ್ಲ. ನನ್ನ ಇತಿಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ ಎಂದು ತಮ್ಮ ಕಾರ್ಯ ವೈಖರಿಯನ್ನು ಸುಮಲತಾ ಸಮರ್ಥಿಸಿಕೊಂಡರು.

ಜನರ ಸಮಸ್ಯೆ ಆಲಿಸಲು ನಾನು ಅತಿಹೆಚ್ಚು ದಿಶಾ ಸಭೆ ನಡೆಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂಬ ಆತ್ಮತೃಪ್ತಿ ಇದೆ. ವೈಯಕ್ತಿಕವಾಗಿ ನಾಲ್ಕು ತಿಂಗಳ ವೇತನವನ್ನೂ ನೀಡಿದ್ದೇನೆ. ಆದರೆ ಅದನ್ನು ನಾನು ಪ್ರಚಾರಕ್ಕೆ ಬಳಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಗೆ ಆಯ್ಕೆಯಾದ ಮೇಲೆ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಪ್ರತಿ ಹಂತದಲ್ಲೂ ನನಗೆ ಕಿರಿಕಿರಿ, ಅಪಮಾನ, ಅವಮಾನವಾಯಿತು. ಆದರೆ ಜಿಲ್ಲೆಯ ಜನತೆ ನನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಕೆಲಸ ಮಾಡಿದ್ದೇನೆ. ಕೆಲವರ ಬಗ್ಗೆ ನಾನು ಮಾತನಾಡಿ ಚಿಕ್ಕವಳಾಗುವುದಿಲ್ಲ ಎಂದು ಹೇಳಿದರು.

ಸುಪ್ರೀಂನಲ್ಲಿ ಮಾಡಾಳ್ ಜಾಮೀನು ಪ್ರಶ್ನಿಸಲು ಮುಂದಾದ ಲೋಕಾಯುಕ್ತ

ಲೋಕಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಅನೇಕ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಿರುವ ತೃಪ್ತಿ ಇದೆ. ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ನೀರು ಕುಡಿಯುವ ಘಟಕ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ ಎಂದು ತಿಳಿಸಿದರು.

ಕೆಆರ್‍ಎಸ್ ಅಣೆಕಟ್ಟನ್ನು ಮೈಸೂರು ಮಹಾರಾಜರು ಕಟ್ಟಿಸಿಕೊಟ್ಟರು. ಅದರ ಸುರಕ್ಷತೆ ಬಗ್ಗೆ ನಾನು ದನಿ ಎತ್ತಿದಾಗ ನನ್ನ ಬಗ್ಗೆ ಅಪಸ್ವರ ಎತ್ತಿದರು. ಆದರೆ ಇದಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ದಳಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷೇತರ ಸದಸ್ಯಳಾಗಿದ್ದರೂ ನನಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಎಲ್ಲಿಯೂ ತಾರತಮ್ಯವಾಗಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದರು.

ನನ್ನನ್ನು ಅನೇಕ ಪಕ್ಷಗಳ ಮುಖಂಡರು ಪಕ್ಷ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ. ನೀವು ಬಂದರೆ ಪಕ್ಷಕ್ಕೆ ಬಲವರ್ಧನೆ ಬರಲಿದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಮಾಡುವುದಿಲ್ಲ. ಇದು ನಾಡದೇವತೆ ಚಾಮುಂಡೇಶ್ವರಿ ಮೇಲೆ ಆಣೆ ಎಂದು ಶಪಥ ಮಾಡಿದರು.

ಕಾಂಗ್ರೆಸ್‌ಗೆ ಜಂಪ್ ಮಾಡಲು ಸೋಮಣ್ಣ, ನಾರಾಯಣಗೌಡ, ಪೂರ್ಣಿಮ ತಯಾರಿ

ಅಭಿಷೇಕ್ ಅಂಬರೀಶ್ ಅವರಿಗೆ ಟಿಕೆಟ್ ಕೊಡಿಸಲು ನಾನು ಲಾಬಿ ಮಾಡಿಲ್ಲ. ಅವನಿಗೆ ರಾಜಕೀಯ ಕ್ಷೇತ್ರ ಇಷ್ಟವೂ ಇಲ್ಲ. ಅಲ್ಲದೆ ನಾನು ಇರುವವರೆಗೂ ಅವನನ್ನು ರಾಜಕೀಯಕ್ಕೆ ಬರಲು ಬಿಡುವುದಿಲ್ಲ. ದ್ವೇಷ ರಾಜಕಾರಣ ನಮ್ಮ ಶಬ್ದಕೋಶದಲ್ಲೇ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.

Sumalata Ambarish, Declare, support, BJP,

Articles You Might Like

Share This Article