‘ಸುಮಲತಾರನ್ನು KRS ಬಾಗಿಲಿಗೆ ಮಲಗಿಸಬೇಕು’ : ಕುಮಾರಸ್ವಾಮಿ

ಬೆಂಗಳೂರು,ಜು.5-ಕೆಆರ್‍ಎಸ್ ಜಲಾಶಯ ಸೋರಿಕೆಯಾಗುತ್ತಿದ್ದರೆ ನೀರು ಹೋಗದಂತೆ ಕೆಆರ್‍ಎಸ್ ಬಾಗಿಲಲ್ಲಿ ಸಂಸದರನ್ನೇ ಮಲಗಿಸಿಬಿಟ್ಟರೆ ಬಿಗಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಸಂಸದರು ಕೆಆರ್‍ಎಸ್ ಸೋರುತ್ತಿದ್ದು, ಮಂಡ್ಯ ಜಿಲ್ಲೆಗೆ ಇಂಥ ಸಂಸದರು ಹಿಂದೆ ಸಿಕ್ಕಿಲ್ಲ, ಮುಂದೆಯೂ ಬರುವುದಿಲ್ಲ ಎಂದು ಸಂಸದೆ ಸುಮಲತಾ ಅವರ ಹೆಸರನ್ನು ಪ್ರಸ್ತಾಪಿಸಿದೆ ಟೀಕಿಸಿದರು.

ಮಂಡ್ಯದ ದಿಶಾ ಸಭೆಯಲ್ಲಿ ಕೆಆರ್‍ಎಸ್ ರಕ್ಷಣೆ ಮಾಡುವ ಪ್ರಸ್ತಾಪ ಮಾಡಿದ್ದಾರೆ. ಕೆಲಸ ಮಾಡಲು ಸರಿಯಾದ ಮಾಹಿತಿ ಇಲ್ಲದೆ ಕಾಟಾಚಾರಕ್ಕೆ ವೈಯಕ್ತಿಕ ದ್ವೇಷದ ಹೇಳಿಕೆ ನೀಡಿದರೆ ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಗರಮ್ಮಾದರು.

ಅನುಕಂಪದಲ್ಲಿ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರ ಋಣವನ್ನು ತೀರಿಸಬೇಕು. ಇಲ್ಲವೇ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಪದೇ ಪದೇ ಅಂತಹ ಅವಕಾಶಗಳು ಸಿಗುವುದಿಲ್ಲ ಎಂದು ಹೇಳಿದರು.

Sri Raghav

Admin