ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಸಚ್ಚಿದಾನಂದ

Social Share

ಬೆಂಗಳೂರು,ಜ.13- ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬುದರ ಕುರಿತು ಹಿತೈಷಿಗಳು ಹಾಗೂ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿದ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶೀಘ್ರದಲ್ಲೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಇಂಡುವಾಳ ಸಚ್ಚಿದಾನಂದ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಲತಾ ಅಂಬರೀಶ್ ಅವರನ್ನು, ಪಕ್ಷಕ್ಕೆ ಬರುವಂತೆ ಬಿಜೆಪಿ ಕೆಲವು ನಾಯಕರು ಆಹ್ವಾನ ನೀಡಿರುವುದು ಸತ್ಯ. ಆದರೆ ಇದುವರೆಗೂ ಯಾವುದೇ ನಿರ್ಧಾರವನ್ನು ಈವರೆಗೂ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಅಂಬರೀಶ್ ತುಂಬ ಸ್ಪಷ್ಟತೆ ಮತ್ತು ನಿಖರತೆಯಿಂದ ಇದ್ದಾರೆ. ಅವರಿಗೆ ಯಾವ ಗೊಂದಲವೂ ಇಲ್ಲ. ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು, ತಮ್ಮ ಮುಂದಿನ ರಾಜಕೀಯ ನಿರ್ಧಾರ ಏನಿರಬೇಕು ಎಂಬುದರ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತಾರೆ. ಇದರಲ್ಲಿ ಯಾರ ಒತ್ತಡವೂ ಇಲ್ಲ ಎಂದು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಬಿಜೆಪಿಯವರು ಅಭ್ಯರ್ಥಿ ಹಾಕದೆ ಅವರಿಗೆ ಬೆಂಬಲ ಕೊಟ್ಟಿದ್ದಾರೆ. ಖುದ್ದು ಪ್ರಧಾನಿ ನರೇಂದ್ರಮೋದಿ ಅವರೇ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಬೇಕೆಂದು ಮತದಾರರಿಗೆ ಕರೆ ಕೊಟ್ಟಿದ್ದರು ಎಂದರು.

ಆದಿಯೋಗಿ ಪ್ರತಿಮೆ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ

ಅವರ ಜೊತೆ ಪಕ್ಷದ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ತಮ್ಮನ್ನು ಗೆಲ್ಲಿಸಿದ ಮತದಾರರ ಅಭಿಪ್ರಾಯವನ್ನು ಪಡೆಯದೇ ಯಾವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ವಿವರಿಸಿದರು.

ಸುಮಲತಾ ಅಂಬರೀಸ್ ಕಾಂಗ್ರೆಸ್ ಸೇರ್ಪಡೆಗೆ ಡಿ.ಕೆ.ಶಿವಕುಮಾರ್ ಅಡ್ಡಿ ಪಡಿಸುತ್ತಿದ್ದಾರಾ? ಎಂಬ ಪ್ರಶ್ನೆಗೆ, ನಾನು ಮೊದಲಿನಿಂದಲೂ ಅವರನ್ನು ಬಲ್ಲೆ. ಅವರು ಎಲ್ಲಿಯೂ ಅರ್ಜಿ ಹಾಕಿಕೊಂಡು ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಹೇಳಿಲ್ಲ. ನಿಜವಾಗಿಯೂ ಯಾರು, ಯಾರ ಅಸೋಸಿಯೇಟ್ ಆಗಿದ್ದಾರೆ ಎಂಬುದೇ ಗೊತ್ತಿಲ್ಲ. ಯಾರು ಯಾರ ಕೈ ಕೈ ಹಿಡಿದುಕೊಂಡು ವಿಧಾನಸೌಧ ಸುತ್ತಾಡಿದರೂ ಡಿ.ಕೆ.ಅಣ್ಣನ ಅಥವಾ ಸುಮಲತಾ ಮೇಡಂ ಅವರಾ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

ನಾನೊಬ್ಬ ಅಭಿಮಾನಿಯಾಗಿ ಬಿಜೆಪಿಗೆ ಸೇರ್ಪಡೆಯಾಗುವಂತೆ ಮನವಿ ಮಾಡಿದ್ದೇನೆ. ಅಂತಿಮವಾಗಿ ಯುದ್ಧ ಕೈಗೊಳ್ಳಲು ಅವರು ಸರ್ವ ಸ್ವತಂತ್ರರು. ನಾವು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟಿಸಿ ಬರಲಿರುವ ಚುನಾವಣೆಯಲ್ಲಿ ಗೆಲ್ಲಲು ಕಾರ್ಯತಂತ್ರ ರೂಪಿಸಿದ್ದೇವೆ.

ಮೆಟ್ರೋ ಪಿಲ್ಲರ್ ದುರಂತ : ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

ಸುಮಲತಾ ಮೇಡಂ ಸ್ಪರ್ಧೆ ಮಾಡುವಾಗ, ಡಿಕೆಶಿ ಅವರನ್ನು ಭೇಟಿ ಮಾಡಿದ್ದೆ. ನಾನೇ ಮೇಡಂನ ಕರೆದುಕೊಂಡು ಹೋಗಿ ಭೇಟಿ ಮಾಡಿದ್ದೆ. ಅವಾಗ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡದಂತೆ ಡಿಕೆಶಿ ಮನವೊಲಿಕೆ ಮಾಡಿದ್ದರು. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೂ ಮನವೊಲಿಸುವ ಕೆಲಸ ಮಾಡಿದರು. ನಿಜವಾಗಿಯೂ ಯಾರು ಯಾರ, ಅಸೋಷಿಯೇಟ್ ಎಂದು ಗೊತ್ತಿಲ್ಲ ಎಂದರು.

Sumalatha Ambarish, Sachidananda, join, BJP, party,

Articles You Might Like

Share This Article