ಸಂಸದೆ ಸುಮಲತಾ ವಿರುದ್ಧ ಶಾಸಕರ ಅಸಮಾಧಾನ

Social Share

ಮಂಡ್ಯ, ಮಾ.9- ಉಭಯ ಸದನಗಳ ಅಧಿವೇಶನ ನಡೆಯುವ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಶಾಸಕರು ಸದಸ್ಯರಾಗಿರುವ ಸಕ್ಷಮ ಪ್ರಾಧಿಕಾರಗಳ ಸಭೆ ಕರೆಯಬಾರದು ಎಂಬ ಸರ್ಕಾರದ ಆದೇಶವಿದ್ದರೂ ಸಂಸದೆ ಸುಮಲತಾ ಅಂಬರೀಶ್ ದಿಶಾ ಸಮಿತಿ ಸಭೆ ನಡೆಸಿ ಸರ್ಕಾರದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ಉಭಯ ಸದನಗಳಲ್ಲೂ ನಡೆಯುತ್ತಿದ್ದು, ಶಾಸಕರು ಪಾಲ್ಗೊಂಡು ಚರ್ಚೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಂಡ್ಯದಲ್ಲಿ ದಿಶಾ ಸಮಿತಿ ಸಭೆ ನಡೆಸಿರುವುದರಿಂದ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ದಿಶಾ ಸಭೆಯನ್ನು ಮುಂದೂಡಲು ಅವಕಾಶವಿದ್ದರೂ ಸಂಸದರು ಆ ಪ್ರಕ್ರಿಯೆ ನಡೆಸದಿರುವುದು ಶಾಸಕರ ಹಕ್ಕುನ್ನು ಮೊಟಕುಗೊಳಿಸಿದಂತಾಗಿದೆ ಎಂದು ಹೇಳಲಾಗುತ್ತಿದೆ.
ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡಿರುವ ಸಮಯದಲ್ಲಿ ದಿಶಾ ಸಮಿತಿ ಸಭೆ ನಡೆಸಿರುವ ಸುಮಲತಾ ಶಾಸಕರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ದಿಶಾ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಸಭೆಯನ್ನು ಮುಂದೂಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದರೂ ಸಂಸದರು ಅದಕ್ಕೆ ಮನ್ನಣೆ ನೀಡದೆ ಶಾಸಕರ ವಿರುದ್ಧ ಪ್ರತಿಷ್ಠೆ ಮುಂದುವರೆಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.
ಕೇಂದ್ರ ಪುರಸ್ಕøತ ಯೋಜನೆಗಳು ಕೇವಲ ಸಂಸದರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಕಾಮಗಾರಿಗಳ ವಿಷಯದಲ್ಲಿ ಶಾಸಕರ ಜವಾಬ್ದಾರಿಯೂ ಇರುತ್ತದೆ. ಅವರ ಅನುಪಸ್ಥಿತಿಯಲ್ಲಿ ದಿಶಾ ಸಮಿತಿ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳುಕೇಳಿಬರುತ್ತಿವೆ.
ಕಾಮಗಾರಿಗಳ ವಿಷಯದಲ್ಲಿ ಶಾಸಕರೂ ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳು, ಅಭಿಪ್ರಾಯಗಳು, ಸಲಹೆ-ಸೂಚನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಶಾಸಕರು ಸಭೆನಡೆಸದಂತೆ ಮನವಿ ಮಾಡಿದ್ದರೂ ಸಭೆ ನಡೆಸಿರುವ ಸಂಸದರ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Articles You Might Like

Share This Article