7 ವರ್ಷದ ಬಳಿಕ ಯುಎಸ್ ಓಪನ್ ಗೆದ್ದ ಭಾರತದ ಸುಮಿತ್ ನಾಗಲ್

ನ್ಯೂಯಾರ್ಕ್, ಸೆ.2- ಇಲ್ಲಿ ನಡೆಯುತ್ತಿರುವ ಅಮೆರಿಕನ್ ಓಪನ್ ಟೆನ್ನಿಸ್‍ನಲ್ಲಿ ಭಾರತದ ಸುಮಿತ್ ನಾಗಲ್ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ್ದಾರೆ. ಕಳೆದ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕದ ಬ್ಲಾಡ್ಲಿ ಕ್ಲಾನ್ ಅವರನ್ನು 6-1 , 6-3, 3-6, 2-1 ಸೆಟ್‍ಗಳ ಅಂತರದಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

ಏಳು ವರ್ಷದ ನಂತರ ಗ್ರ್ಯಾಂಡ್ ಸ್ಲ್ಯಾಮ್‍ವೊಂದರಲ್ಲಿ ಭಾರತದ ಟೆನ್ನಿಸ್ ಆಟಗಾರ ಎರಡನೆ ಸುತ್ತು ಪ್ರವೇಶಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎರಡು ಗಂಟೆ 12 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಅಂತಿಮವಾಗಿ ಭಾರತದ ಸುಮಿತ್ ಗೆಲುವು ಸಾಧಿಸಿ ಬೀಗಿದ್ದಾರೆ.

ಈ ಹಿಂದೆ 2013ರ ಯುಎಸ್ ಓಪನ್‍ನಲ್ಲಿ ಭಾರತದ ಸೋಮ್‍ದೇವ್ ಎರಡನೆ ಹಂತ ಪ್ರವೇಶಿಸಿದರು.  ಈ ಹೋರಾಟ ನನಗೆ ಸುಲಭವಾಗಿರಲಿಲ್ಲ. ಆದರೂ ಮೊದಲ ಸೆಟ್‍ನಲ್ಲಿ ಸೋತರೂ ಕೂಡ ಧೃತಿಗೆಡದೆ ನನ್ನ ಸಾಮಥ್ರ್ಯವನ್ನು ಪ್ರದರ್ಶಿಸದೆ ಅದಕ್ಕೆ ಫಲ ಸಿಕ್ಕಿದೆ ಎಂದು ಸುಮಿತ್ ಹೇಳಿದ್ದಾರೆ.