ತುಮಕೂರು,ಸೆ.15-ತಾಲೂಕಿನ ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೂಪರಿಂಟೆಂಡೆಂಟ್ ಕಾಲೇಜಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ತುಮಕೂರಿನ ಜಯನಗರದ ನಿವಾಸಿ ನಾಗರಾಜು(55)ಆತ್ಮಹತ್ಯೆ ಮಾಡಿಕೊಂಡಿರುವ ಸೂಪರಿಂಟೆಂಡೆಂಟ್ ಎಂದು ಗುರುತಿಸಲಾಗಿದೆ.
ಬೆಳಗ್ಗೆ ಕಾಲೇಜಿಗೆ ದಿನಪತ್ರಿಕೆ ವಿತರಿಸಲು ತೆರಳಿದ್ದಾಗ ಸ್ಥಳೀಯರಿಗೆ ವಿಷಯ ಗೊತ್ತಾಗಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆಯಿಂದ ಉಪನ್ಯಾಸಕರು,ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಸಂವಿಧಾನ ಪೀಠಿಕೆ ಓದುವ ಮೂಲಕ ಇತಿಹಾಸ ಬರೆದ ಕರ್ನಾಟಕ
ಹಣಕಾಸಿನ ಸಂಕಷ್ಟದಿಂದ ನೊಂದು ನಾಗರಾಜು ಸಾವಿಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ನಾಗರಾಜು ಮೊದಲಿನಿಂದಲೂ ಚೀಟಿ ವ್ಯವಹಾರದಲ್ಲಿ ಆಸಕ್ತರಾಗಿದ್ದರು ಎನ್ನಲಾಗಿದೆ, ಸಹೋದ್ಯೋಗಿಗಳ ಹಣವನ್ನು ಇತರರ ಬಳಿ ಹೂಡಿಕೆ ಮಾಡಿಸಿದ್ದರು ಅವರು ಮೋಸ ಮಾಡಿದ ಕಾರಣ ನೊಂದಿದ್ದರು ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
#Superintendent, #GraduateCollege, #commitssuicide,