ಕೆಂಪುಕೋಟೆ ಮೇಲೆ ದಾಳಿ ಪ್ರಕರಣ : ಎಲ್‍ಇಟಿ ಉಗ್ರನ ಮರಣದಂಡನೆ ಎತ್ತಿಹಿಡಿದ ಸುಪ್ರೀಂ

Social Share

ನವದೆಹಲಿ, ನ.3- ದೆಹಲಿಯ ಕೆಂಪುಕೋಟೆಯ ಮೇಲೆ ದಾಳಿ ನಡೆಸಿ ಮೂರು ಮಂದಿಯ ಹತ್ಯೆಗೆ ಕಾರಣವಾಗಿದ್ದ ಪ್ರಕರಣದಲ್ಲಿ ಲಸ್ಕರ್-ಇ-ತೋಯ್ಬಾ (ಎಲ್‍ಇಟಿ) ಸಂಘಟನೆಯ ಉಗ್ರಗಾಮಿ ಮೊಹಮ್ಮದ್ ಆರಿಫ್ ಅಲಿಯಾಸ್ ಅಷಕ್‍ಗೆ ವಿಸಲಾಗಿರುವ ಮರಣ ದಂಡನೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಘೋಷಿತ ಅಪರಾಧಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್, ನ್ಯಾಯಮೂರ್ತಿಗಳಾದ ಬೇಲ ಎಂ.ತ್ರಿವೇದಿ ಅವರನ್ನೊಳಗೊಂಡ ಸಂಯುಕ್ತ ಪೀಠ ತಿರಸ್ಕರಿಸಿದೆ.

ಕಳೆದ 2000ನೆ ಸಾಲಿನಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಉಗ್ರದಾಳಿ ನಡೆದಿತ್ತು. ಆ ಘಟನೆಯಲ್ಲಿ ದೆಹಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದರು ,ಕೆಂಪುಕೋಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆಯೇ ತನಿಖೆ ನಡೆಸಿದ್ದು, ಇದೀಗ ಯಾವುದೇ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ನಟ ಶಶಿಕುಮಾರ್, ಮುದ್ದಹನುಮೇಗೌಡ ಸೇರಿ ಕಮಲ ಮುಡಿದ ಹಲವು ನಾಯಕರು

ಈ ಅಪರಾಧ ಬಗ್ಗೆ ಎಲ್ಲ ಸಾಕ್ಷಿಗಳು ಸಾಬೀತಾಗಿದ್ದು ಮರುಪರಿಶೀಲನೆ ಮಾಡುವ ಅಗತ್ಯವಿಲ್ಲ ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ವಿದ್ಯುನ್ಮಾನ ದಾಖಲಾತಿಗಳನ್ನು ಪರಿಗಣಿಸುವುದಾಗಿಯೂ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆ.

PSI ನೇಮಕಾತಿ : ಮೊದಲ ರ‍್ಯಾಂಕ್‌ ಪಡೆದಿದ್ದ ಸುಪ್ರಿಯಾ ಅರೆಸ್ಟ್

Articles You Might Like

Share This Article