ನೋಟು ಅಮಾನೀಕರಣ ಮಾನ್ಯ ಮಾಡಿದ ಸುಪ್ರೀಂ

Social Share

ನವದೆಹಲಿ,ಜ.2- ಕಳೆದ ಆರು ವರ್ಷಗಳ ಹಿಂದೆ ಘೋಷಣೆಯಾಗಿದ್ದ ನೋಟು ಅಮಾನೀಕರಣ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ 58 ಅರ್ಜಿಗಳನ್ನು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ವಜಾಗೊಳಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವದ ನಿರ್ಣಯವನ್ನು ಬಹುಮತದೊಂದಿಗೆ ಮಾನ್ಯ ಮಾಡಿದೆ.

ನ್ಯಾಯಾಧೀಶರಾದ ಎಸ್.ಅಬ್ದುಲ್ ನಜೀರ್ ನೇತೃತ್ವದಲ್ಲಿ ರಚನೆಯಾಗಿದ್ದ ಬಿ.ಆರ್.ಗವೈ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣ್ಯಂ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಇಂದು ತನ್ನ ತೀರ್ಪನ್ನು ಪ್ರಕಟಿಸಿದೆ. ಅದರಲ್ಲಿ ನಾಗರತ್ನ ಅವರನ್ನು ಹೊರತು ಪಡಿಸಿ ಉಳಿದೆಲ್ಲಾ ನ್ಯಾಯಮೂರ್ತಿಗಳು, ನೋಟು ಅಮಾನೀಕರಣಕ್ಕೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ತೀರ್ಪು ನೀಡಿದ್ದಾರೆ.

ಈ ಮೂಲಕ 2016ರಿಂದ ನಡೆಯುತ್ತಿದ್ದ ಕಾನೂನು ಸಂಘರ್ಷ ಇತ್ಯರ್ಥವಾಗಿದ್ದು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನ್ಯಾಯಾಂಗದ ಬೆಂಬಲ ಸಿಕ್ಕಂತಾಗಿದೆ. ಐದು ಮಂದಿ ನ್ಯಾಯಾೀಧಿಶರ ಪೈಕಿ ನಾಲ್ಕು ಜನ ಪ್ರಧಾನಿ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದು, ಬಹುಮತದ ತೀರ್ಪು ಹೊರ ಬಿದಿದ್ದೆ.

ಕಳೆದ ವರ್ಷ ಜುಲೈನಲ್ಲೇ ರಾಜ್ಯದಲ್ಲಿ BF.7 ವೈರಸ್ ಪತ್ತೆಯಾಗಿತ್ತು..!

ನಾಲ್ವರು ನ್ಯಾಯಮೂರ್ತಿಗಳು, ನೋಟು ಅಮಾನೀಕರಣಕ್ಕೂ ಮುನ್ನಾ ಆರು ತಿಂಗಳ ಮೊದಲು ಕೇಂದ್ರ ಬ್ಯಾಂಕ್ ಆಗಿರುವ ಆರ್‍ಬಿಐ ಮತ್ತು ಕೇಂದ್ರ ಸರ್ಕಾರ ಪರಸ್ಪರ ಸಮಾಲೋಚನೆ ನಡೆಸಿವೆ. ಅಮಾನೀಕರಣಗೊಂಡ 500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು 52 ದಿನಗಳ ಕಾಲಾವಕಾಶ ನೀಡಿರುವುದು ಸಮಂಜಸವಾಗಿದೆ.

ಈಗ ಮತ್ತೆ ಅಮಾನೀಕರಣಗೊಂಡ ನೋಟುಗಳ ಬದಲಾವಣೆಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಇದಕ್ಕೂ ಮೊದಲು 1978ರಲ್ಲಿ ಅಮಾನೀಕರಣ ಜಾರಿಗೆ ತಂದಾಗ ಹಳೆಯ ನೋಟುಗಳ ಬದಲಾವಣೆಗೆ ಮೂರು ದಿನಗಳ ಕಾಲವಕಾಶ ಮಾತ್ರ ನೀಡಲಾಗಿತ್ತು, ನಂತರ ಅದನ್ನು ಮತ್ತೆ ಐದು ದಿನಗಳ ಕಾಲ ವಿಸ್ತರಣೆ ಮಾಡಿರುವ ಉದಾಹರಣೆ ಇದೆ ಎಂದು ನ್ಯಾಯಾಮೂರ್ತಿಗಳು ಹೇಳಿದ್ದಾರೆ.

ನೋಟು ಅಮಾನೀಕರಣದ ಉದ್ದೇಶ ಸಾಫಲ್ಯವಾಗಿದೇಯೇ ಇಲ್ಲವೇ ಎಂಬುದು ಅಪ್ರಸ್ತುತವಾಗಿದೆ. ನೋಟು ಅಮಾನೀಕರಣ ಸರ್ಕಾರದ ಆರ್ಥಿಕ ಕಾರ್ಯಾಂಗದ ನೀತಿಯ ಭಾಗವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ವ್ಯತಿರಿಕ್ತ ತೀರ್ಪು ನೀಡಿರುವ ಬಿ.ವಿ.ನಾಗರತ್ನ ಅವರು, ನೋಟು ಅಮಾನೀಕರಣದ ನಿರ್ಧಾರವನ್ನು ಆರ್‍ಬಿಐ ತೆಗೆದುಕೊಳ್ಳಬೇಕೆ ಹೊರತು ಕೇಂದ್ರ ಸರ್ಕಾರವಲ್ಲ. 2016ರಲ್ಲಿ ಇದು ತಿರುವು ಮರುವಾಗಿದ್ದು, ಲೋಪಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೋಟು ಅಮಾನೀಕರಣಗೊಳಿಸುವ ನಿರ್ಧಾರ ಸರ್ಕಾರದಲ್ಲಿ ಜನ್ಮತಾಳಿದೆ ಮತ್ತು ಆರ್‍ಬಿಐನ ಅಭಿಪ್ರಾಯ ಕೇಳಲಾಗಿದೆ. ಆರ್‍ಬಿಐ ನೀಡಿರುವ ಅಭಿಪ್ರಾಯವನ್ನು ಶಿಫಾರಸ್ಸು ಎಂದು ಪರಿಗಣಿಸಲು ಆರ್‍ಬಿಐ ಕಾಯ್ದೆ ಸೆಕ್ಷನ್ 26 (2)ರ ಪ್ರಕಾರ ಸಾಧ್ಯವಿಲ್ಲ ಎಂದಿದ್ದಾರೆ.

ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಾಗ್ರಿ ಎಕ್ಸ್ ಪ್ರೆಸ್ ರೈಲು

ಸಂಸತ್‍ನಲ್ಲಿ ಚರ್ಚೆ ಮಾಡಿ ನೋಟು ಅಮಾನೀಕರಣದ ಕುರಿತು ಕಾನೂನು ರೂಪಿಸಬೇಕಿತ್ತು. ಅಧಿಸೂಚನೆಯ ಮೂಲಕ ಪಕ್ರಿಯೆಯನ್ನು ಜಾರಿಗೊಳಿಸುವುದಲ್ಲ ಎಂದು ನಾಗರತ್ನ ಖಾರವಾಗಿ ತನ್ನ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.

Supreme Court, demonetisation, judgment,

Articles You Might Like

Share This Article